ಜುಲೈ-2023 ತಿಂಗಳಲ್ಲಿ ನಿವೃತ್ತಿ ಹೊಂದಲಿರುವ ಶಿಕ್ಷಕರು.

 ಮಧುಗಿರಿ ತಾಲೂಕಿನ  ಜುಲೈ-2023 ರ  ಮಾಹೆಯಲ್ಲಿ ನಿವೃತ್ತಿ ಹೊಂದುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರ ಮಾಹಿತಿ.


ಶಿಕ್ಷಣ ಇಲಾಖೆಯಲ್ಲಿ ಸಹ ಶಿಕ್ಷಕರಾಗಿ ಸರ್ಕಾರಿ ಶಾಲೆಗಳಲ್ಲಿ ಸೇವೆಗೆ ಪಾದಾರ್ಪಣೆ ಮಾಡಿ ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಸುಜ್ಙಾನದ ದೀವಿಗೆಯನ್ನು ಕಂಗೊಳಿಸಿ ಇಂದು ಸರ್ಕಾರಿ ಸೇವೆಯಿಂದ ನಿವೃತ್ತಿಯಾಗುತ್ತಿರುವವರ ಕಿರು ಪರಿಚಯ.



1. ಶ್ರೀ ಚಂದ್ರಣ್ಣ ಡಿ.ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನಕಲೋಟಿ.

ಮಧುಗಿರಿ ತಾಲೂಕಿನ ದೈವ ಮೂಲೆ ಎಂದೇ ಪ್ರಸಿದ್ದಿ ಪಡೆದಿರುವ  ನರಸಿಂಹ ಸ್ವಾಮಿಯ  ಸನ್ನಿದಾನಕ್ಕೆ ಸಮೀಪವಿರುವ ಹಾಗೂ ಮಧುಗಿರಿಯ ಕುಕ್ಕೇ  ಎಂಬ ಪ್ರಸಿದ್ದಿ ಪಡೆದಿರುವ ತಾಡಿ ನಾಗಮ್ಮನ  ಆಲಯದ  "ಇಕಟದಿಬ್ಬನಹಳ್ಳಿ" (ಐ ಡಿ ಹಳ್ಳಿ) ಯ ದಾಸಪ್ಪ ಮತ್ತು ನಾರಾಯಣಮ್ಮ ದಂಪತಿಯ ಮಗನಾಗಿ ದಿನಾಂಕ:17.07.1963 ರಲ್ಲಿ ಜನಿಸಿದ, ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸ್ಚಗ್ರಾಮದ ಸರ್ಕಾರಿ ಶಾಲೆಯಲ್ಲಿ ಪಡೆದರು, ಪದವಿ ಪೂರ್ವ ಶಿಕ್ಷಣವನ್ನು  ಮಿಡಿಗೇಶಿ ಸರ್ಕಾರಿ ಕಾಲೇಜಿನಲ್ಲಿ ಪಡೆದು ಐ ಟಿ ಸಿ ತರಬೇತಿಯನ್ನು ಕೊರಟಗೆರೆ ಕಾಲೇಜಿನಲ್ಲಿ ಪೊರೈಸಿದರು. ದಿನಾಂಕ:18.08.1993 ರಲ್ಲಿ ಮಧುಗಿರಿ ತಾಲೂಕಿನ ಹೊಸಕೊಟೆ ಶಾಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸರ್ಕಾರಿ ಸೇವೆಗೆ ಸೇರಿದರು.
ತಾಲೂಕಿನ ಗೂಲಹಳ್ಳಿ(5),ಡಿ.ಡಿ.ವಟ್ಟ (4.5),ಸಾದರಹಳ್ಳಿ (4) ಹೊಸಇಟಕಲೋಟಿ (4.5) ಶಾಲೆಗಳಲ್ಲಿ ಸಹ ಶಿಕ್ಷಕನಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ ಇವರು ಬಡ್ತಿ ಮುಖ್ಯ ಶಿಕ್ಷಕರಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನಕಲೋಟಿ ಶಾಲೆಗೆ ಕರ್ತವ್ಯ ಹಾಜರಾದರು. ಪ್ರಸುತ್ತ ಶಾಲೆಯಲ್ಲಿ ವಿದ್ಯಾರ್ಥಿಗಳ ಗುಣಾತ್ಮಕ ಕಲಿಕೆಗಾಗಿ ಸಹಶಿಕ್ಷಕರ, ಎಸ್ ಡಿ ಎಮ್ ಸಿ ಸಮಿತಿ, ದಾನಿಗಳ ಸಹಕಾರದಿಂದ ಕುಗ್ರಾಮದಲ್ಲೂ ಆಂಗ್ಲ ಭಾಷೆಯ ಕಲಿಕೆಯಲ್ಲಿ ಜಿಲ್ಲೆಯಲ್ಲಿ ಪ್ರಸಿದ್ದ ಪಡೆದ ಶಾಲೆಯಾಗಲು ಶ್ರಮಿಸಿದ್ದಾರೆ. ಸುಮಾರು 29 ವರ್ಷ,11 ತಿಂಗಳು 13 ದಿನಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿದ್ದಾರೆ.

2. ಶ್ರೀ ದಾಸಪ್ಪ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮ ಸಮುದ್ರ
ಶತಾಯುಷಿ,ತ್ರಿವಿಧ ದಾಸೋಹಿ,  ನಡೆದಾಡುವ ದೇವರು ಡಾ|| ಶ್ರೀ ಶ್ರೀ ಶಿವಕುಮಾರ ಸ್ಚಾಮೀಜಿಯ ರವರು ಕರ್ಮಭೂಮಿ ಸಿದ್ದಗಂಗಾ ಕ್ಷೇತ್ರದ ಕೂಗಳತೆಯಲ್ಲಿರುವ ಮೈದಾಳ ಗ್ರಾಮದ ಕೆಂಪಯ್ಯ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ದಿನಾಂಕ:20.07.1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದ  ಇವರು ಪ್ರೌಢ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಯನ್ನು ಸಿದ್ದಗಂಗಾ ಮಠದ ಕಾಲೇಜಿನಲ್ಲಿ ಪಡೆದರು.
ಸರ್ಕಾರಿ ಸೇವೆಗೆ ಸೇರುವ ಮುನ್ನ ಹಲವಾರು ವರ್ಷಗಳ ಕಾಲ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸಿದರು ನಂತರ ಮಧುಗಿರಿ ತಾಲೂಕಿನ ಚನ್ನಮಲ್ಲನಹಳ್ಳಿಯ ಶಾಲೆಯಲ್ಲಿ ಸಹ ಶಿಕ್ಷಕನಾಗಿ ದಿನಾಂಕ:19.08.1993 ರಲ್ಲಿ ಸೇವೆ ಸೇರಿದ ಇವರು ಸುಮಾರು 23 ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ  ಚೀಲನಹಳ್ಳಿ  ಶಾಲೆಗೆ ವರ್ಗಾವಣೆ ಆಗಿ ಸೇವೆ ಸಲ್ಲಿಸಿದರು, 2022 ರ ಮೇ ತಿಂಗಳಲ್ಲಿ  ಬ್ರಹ್ಮಸಮುದ್ರ ಶಾಲೆಗೆ ಬಡ್ತಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದರು. ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದಲಿದ್ದಾರೆ.

3. ಶ್ರೀ ಚಿಕ್ಕಲಕ್ಕಯ್ಯ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದನಹಳ್ಳಿ.
ಸಸ್ಯ ಕಾಶಿ,ಸಿದ್ದರ ತಪೋಭೂಮಿ  ಇತಿಹಾಸ ಪ್ರಸಿದ್ಧ ಸಿದ್ಧರ ಬೆಟ್ಟ ಹಾಗೂ ಸ್ವಯಂ ಉದ್ಭವ ಗೊರವನಹಳ್ಳಿಲಕ್ಷ್ಮಿದೇವಿಯ ಪುಣ್ಯ ಕ್ಷೇತ್ರವಾದ ಕೊರಟಗೆರೆ ತಾಲೂಕಿನ ವಡೇರಹಳ್ಳಿ ಗ್ರಾಮದ ರಂಗಹನುಮಯ್ಯ ಹಾಗೂ ಈರಮ್ಮದಂಪತಿಗಳ ಮಗನಾಗಿ ಜನಿಸಿದರು. ಸ್ವಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ ಪಡೆದರು, ಪ್ರೌಢ ಶಾಲಾ ಶಿಕ್ಷಣವನ್ನು ಕೋಳಾಲದಲ್ಲಿ ಪೂರೈಸಿದರು, ಪಿಯುಸಿಯನ್ನು ತುಮಕೂರಿನ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ, ಶಿಕ್ಷಕರ ತರಬೇತಿಯನ್ನು ಶ್ರೀ ಸಿದ್ಧಗಂಗಾ ಮಠದ ಕಾಲೇಜಿನಲ್ಲಿ ಪಡೆದುಕೊಂಡರು. 
ಸರ್ಕಾರಿ ಸೇವೆಗೆ ದಿನಾಂಕ:18.08.1993 ರಲ್ಲಿ ಸೇರಿದ ಇವರು ಕೊರಟಗೆರೆ ತಾಲೂಕಿನ ವಿವಿಧ ಶಾಲೆಗಳಲ್ಲಿ ವೀರೋಬನಹಳ್ಳಿ(2),ಚಿನ್ನನಹಳ್ಳಿ(7)ಭೂಚನಹಳ್ಳಿ(2),ಹುಲುವಂಗಲ(4),ಚಿಂಪಗಾನಹಳ್ಳಿ(16) ಶಾಲೆಗಳಲ್ಲಿ  ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಮುಖ್ಯ ಶಿಕ್ಷಕರಾಗಿ 2022ರ ಮೇ ಮಾಹೆಯಲ್ಲಿ  ಮೈದನಹಳ್ಳಿ ಶಾಲೆ ಬಡ್ತಿ ಹೊಂದಿದರು. ತಮ್ಮ ಸುದೀರ್ಘ ಸೇವೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಲು ಅಕ್ಷರದ ಅಡಿಗಲ್ಲು ಹಾಕಿ ಸುಂದರ ಸಮೃದ್ಧ ಬಾಳಿನ ಬೆಳಕಾದ ಇವರುಗಳು ಇಂದು ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದುವ ಘಳಿಗೆಯಲ್ಲಿ ಅಭಿನಂದನೆಗಳು.......




ನಲಿ-ಕಲಿ ತರಗತಿಯ ರೂಪಣಾತ್ಮಕ ಮೌಲ್ಯಮಾಪನ-01








ನಲಿ -ಕಲಿ ತರಗತಿಯ ರೂಪಣಾತ್ಮಕ ಮೌಲ್ಯಮಾಪನ-01  ಸಂಪೂರ್ಣ ಮಾಹಿತಿಗಾಗಿ
 ಕ್ಲಿಕ್ ಮಾಡಿ.

HRMS K2


ಸರ್ಕಾರಿ  ನೌಕರರು ತಮ್ಮ ಸೇವಾ ಮಾಹಿತಿಯನ್ನು  ಖಜಾನೆ-2 ತಂತ್ರಾಂಶದ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
ಹಂತ-1 NEW REGISTER  ಆಯ್ಕೆ ಮಾಡಿ.

ಹಂತ-2 KGID ಸಂಖ್ಯೆ ನಮೂದಿಸಿ.

ಹಂತ-3 OTP ENTRY ಮಾಡಿ.

ಹಂತ-4 Password set ಮಾಡಿ (ಉದಾ: Abcdef@23)

ನಂತರ Login page ಓಪನ್ ಮಾಡಿ.

ಹಂತ-5  KGID ಸಂಖ್ಯೆ ನಮೂದಿಸಿ.

ಹಂತ- 6 Password ಹಾಕಿ.

ಹಂತ-7 OTP Entry ಮಾಡಿ.

ಹಂತ-8 Enter captcha.
 





ಪೋಷಕರ ನಡೆ ಶಾಲೆ ಕಡೆ.

ಪೋಷಕರ ನಡೆ ಶಾಲೆ ಕಡೆ ಕಾರ್ಯಕ್ರಮ


ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ  ಈ ವಿಷಯದ ಕುರಿತು ದಿನಾಂಕ :08.07.2023 ರ ಶನಿವಾರ ಬೆಳಿಗ್ಗೆ 9-00 ಗಂಟೆಯಿಂದ "ಶ್ರೀ ರಮೇಶ್ ಅರವಿಂದ" ರವರ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.

 



7 th Pay Calculator.