May 2023

ಮೇ 2023 ಮಾಹೆಯಲ್ಲಿ ಮಧುಗಿರಿ ತಾಲೂಕಿನ ನಿವೃತ್ತ ಶಿಕ್ಷಕರ ಮಾಹಿತಿ.



ಸುದೀರ್ಘ ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಮಧುಗಿರಿ ತಾಲೂಕಿನ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ….

1. ಶ್ರೀಮತಿ ರಂಗಮ್ಮ ರವರು 
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಕೆಆರ್ ಬಡಾವಣೆ ಮಧುಗಿರಿ.
ಶ್ರೀಮತಿ ರಂಗಮ್ಮ ಎಮ್ / ಶ್ರೀ ರಾಮಚಂದ್ರಪ್ಪ  ಮುಖ್ಯ ಶಿಕ್ಷಕಿಯರು ಇವರು ಮಧುಗಿರಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ದಿನಾಂಕ:01-06-1963 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನೇರಳೆಕೆರೆ ಗ್ರಾಮದ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಪಡೆದುಕೊಂಡರು, ಮಧುಗಿರಿಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದರು, ಐಟಿಸಿ ಶಿಕ್ಷಣವನ್ನು ತುಮಕೂರಿನಲ್ಲಿ ಪಡೆದು ಪದವಿ ಶಿಕ್ಷಣವನ್ನು ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ಪಡೆದುಕೊಂಡರು.
 ಇವರು ದಿನಾಂಕ:28-09-1984 ರಲ್ಲಿ ಮಧುಗಿರಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಹರಪುರ ಶಾಲೆಯಲ್ಲಿ ಸರ್ಕಾರಿ ಸೇವೆ ಸೇರಿಕೊಂಡು ನಂತರ ಗಂಜಲಗುಂಟೆ, ಪ್ರಧಾನ ಸರ್ಕಾರಿ ಹಿರಿಯ ಬಾಲಕಿಯರ ಶಾಳೆ ಮಧುಗಿರಿಯ ಶಾಳೆಗಳಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ  ಇವರು ಅವರಗಲ್ಲು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಪಡೆದುಕೊಂಡರು, 2006  ಬಿ ಆರ್ ಪಿ ಯಾಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು ನಂತರ ಸ.ಹಿ.ಪ್ರಾ.ಶಾಲೆ ಬಡಿಗೊಂಡನಹಳ್ಳಿ ಶಾಲೆಗೆ ಬೋಧನಾ ವೃತ್ತಿಗೆ ಮರಳಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಮತ್ತೇ  ಮಧುಗಿರಿ ಟೌನ್ಸಿ  ಆರ್ ಪಿ ಯಾಗಿ ಸುಮಾರು ನಾಲ್ಕು ವರ್ಷಗಳ ಸೇವೆ ಮಾಡಿದ  ಇವರು 2018 ರಲ್ಲಿ ಪುನಃ ಬೋಧನಾ ವೃತ್ತಿಗೆ  ಮಧುಗಿರಿ ಪಟ್ಟಣದ ಕೆ ಆರ್ ಬಡಾವಣೆ ಬಾಲಕಿಯರ ಶಾಲೆಗೆ ತೆರಳಿದರು. ಶಿಕ್ಷಕ ವೃತ್ತಿಯಲ್ಲಿ ಸುಮಾರು 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.


2. ಶ್ರೀ ರಂಗನಾಥ್ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲಮಾಚಿ.
ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ಚಿಕ್ಕಮರಿಯಪ್ಪ ಹಾಗೂ ಭೈರಮ್ಮ ದಂಪತಿಗಳ ಏಕೈಕ ಪುತ್ರನಾಗಿ 01-06-1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿದ ಇವರು ಪಿ ಯು ಸಿ ಶಿಕ್ಷಣವನ್ನು ಮಧುಗಿರಿ,  ಶಿಕ್ಷಕರ ತರಬೇತಿಯನ್ನು ಸಿದ್ದಗಂಗಾ ಮಠದಲ್ಲಿ ತುಮಕೂರು ಪಡೆದುಕೊಂಡರು,  ಪದವಿ ಶಿಕ್ಷಣವನ್ನು ಟಿ ವಿ ವಿ ಶಿಕ್ಷಣ ಸಂಸ್ಥೆ ಮಧುಗಿರಿಯಲ್ಲಿ ಪಡೆದುಕೊಂಡರು.
ದಿನಾಂಕ:18-08-1993 ರಲ್ಲಿ ಸ.ಕಿ.ಪ್ರಾ.ಶಾಲೆ ವೆಂಗಳಮ್ಮನಹಳ್ಳಿ ಸರ್ಕಾರಿ ಸೇವೆ ಸೇರಿಕೊಂಡು 3 ವರ್ಷಗಳ ಕಾಲ ಸೇವೆ ಸಲ್ಲಿಸಿ 1996 ರಲ್ಲಿ ಸ.ಹಿ.ಪ್ರಾ.ಶಾಲೆ ಚೀಲನಹಳ್ಳಿ ಶಾಲೆಗೆ ವರ್ಗಾವಣೆ ಹೊಂದಿದರು ನಂತರ ಸ.ಕಿ.ಪ್ರಾ.ಶಾಲೆ ಕಾರೇನಹಳ್ಳಿ ಶಾಲೆಯಲ್ಲಿ 18 ವರ್ಷಗಳ ಸೇವೆ ಸಲ್ಲಿಸಿ 2020 ರಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಸುತ್ತ ಶಾಲೆ ಬಡ್ತಿ ಹೊಂದಿದರು. 
ಸುಮಾರು 30 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಾ ರಂಗಭೂಮಿ ಕಲಾವಿದರಾಗಿಯೂ ತಮ್ಮನ್ನು ತೊಡಗಿಸಿಕೊಂಡ  ಇವರು  ಭೀಮ.ದಶರಥ, ದುರ್ಯೋಧನ  ಪಾತ್ರಗಳಲ್ಲಿ ಕಲಾ ಸೇವೆಯನ್ನು ಸಲ್ಲಿಸುತ್ತಾ "ಭೀಮ"ನ ಪಾತ್ರಕ್ಕಾಗಿ 'ಬೆಳ್ಳಿ ಕಿರೀಟ' ಪಡೆದುಕೊಂಡಿದ್ದಾರೆ. ಜಿಲ್ಲಾ ಮಟ್ಟದ ರಂಗಭೂಮಿ ಕಲಾವಿದರ ಸಂಘದ ಪ್ರಶಸ್ತಿ, ಕಲಾ ಪ್ರಶಸ್ತಿ, ತಾಲೂಕು ಮಟ್ಟದ ಕನ್ನಡ ರಾಜ್ಯೋತ್ತವ ಪ್ರಶಸ್ತಿಯನ್ನು 2019 ರಲ್ಲಿ ಪಡೆದಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.
                     

3.ಶ್ರೀ ಗೋಪಾಲ್ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡವಾಡಿ.
ಶ್ರೀ ಗೋಪಾಲ್  ಮುಖ್ಯ ಶಿಕ್ಷಕರು ಇವರು ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ಮಗನಾಗಿ ದಿನಾಂಕ:-01-06-1963 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ಚಗ್ರಾಮದಲ್ಲಿ ಪೂರೈಸಿದರು,ಪ್ರೌಢಶಾಲಾ ಶಿಕ್ಷಣವನ್ನು ಹೊಳವನಹಳ್ಳಿ ಪಡೆದುಕೊಂಡರು. ಪಿ ಯು ಸಿ ಶಿಕ್ಷಣವನ್ನು ಮಧುಗಿರಿ ಶಿಕ್ಷಕರ ತರಬೇತಿಯನ್ನು ತುಮಕೂರಿನ ಹೆಗ್ಗರೆಯ ಸಿದ್ದಾರ್ಥ ನಗರದ ಕಾಲೇಜಿನಲ್ಲಿ ಪಡೆದುಕೊಂಡರು.
ದಿನಾಂಕ;-01-08-1989 ರಲ್ಲಿ ರಾಮನಗರ ತಾಲೂಕಿನ ಗಾಣಕಲ್ಲು ಗ್ರಾಮದ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು, ನಂತರ ಕುಣಿಗಲ್ ತಾಲೂಕಿನ ಕುರುಪಾಳ್ಯ ಶಾಲೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿ ಮಧುಗಿರಿ ತಾಲೂಕಿನ ಭೈರವನಗರ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದರು.ನಂತರ ಬಟ್ಟಗೆರೆ ಗ್ರಾಮದಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಕೊಂಡವಾಡಿ ಶಾಲೆಗೆ ಬಡ್ತಿ ಹೊಂದಿದರು.
ಶಿಕ್ಷಕ ವೃತ್ತಿಯಲ್ಲಿ ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.

4. ಶ್ರೀ ಪ್ರಕಾಶ್ ರವರು.
ಮುಖ್ಯ ಶಿಕ್ಷಕರು.
ಕರ್ನಾಟಕ ಪಬ್ಲಿಕ್ ಶಾಲೆ ಮಿಡಿಗೇಶಿ, ಮಧುಗಿರಿ ತಾಲೂಕು
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕೆ ಬಸವನಹಳ್ಳಿ ಗ್ರಾಮದ ಜಿ.ಸಿ ಚಿಕ್ಕಚೌಡಪ್ಪ ಹಾಗೂ ದ್ಯಾವಮ್ಮ ದಂಪತಿಗಳ ಮಗನಾಗಿ ದಿನಾಂಕ:01-06-1963 ರಲ್ಲಿ ಜನಿಸಿದರು. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಕಾರ್ಪೇನಹಳ್ಳಿ ಪಡೆದರು, ಪ್ರೌಢಶಾಲಾ ಶಿಕ್ಷಣವನ್ನು ಮಧುಗಿರಿಯಲ್ಲಿ ಪಡೆದು ಪಿ ಯು ಸಿ ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ವಿವಿ ಪುರಂನ ಸಂಜೆ ಕಾಲೇಜಿನಲ್ಲಿ ಪೂರೈಸಿದರು.
ದಿನಾಂಕ:20-08-1993 ರಲ್ಲಿ ಸ.ಹಿ.ಪ್ರಾ.ಶಾಲೆ ನಾಗೇನಹಳ್ಳಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ  ಇವರು ಮುಂದೆ ಎಮ್ ಗೊಲ್ಲರಹಟ್ಟಿ, ಆರ್ ಗೊಲ್ಲರಹಟ್ಟಿ, ಎಮ್ ಗೊಲ್ಲರಹಟ್ಟಿ(ಕಸಬಾ ಹೋ), ಸೋಗೆನಹಳ್ಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಸಾಲಿನಲ್ಲಿ ಪ್ರಸುತ್ತ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದುಕೊಂಡರು.
            ಶಿಕ್ಷಕ ವೃತ್ತಿಯಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.

5. ಶ್ರೀ ರಾಮಕೃಷ್ಣ ಜಿ.ಎನ್.ರವರು
ಸಹ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟ್ಟಗೆರೆ.
ಕೊರಟಗೆರೆ ತಾಲೂಕಿನ ಗರಗದೊಡ್ಡಿ ಗ್ರಾಮದ  ನಾಗಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ದಿನಾಂಕ:01-06-1963 ರಂದು ಜನಿಸಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಗದೊಡ್ಡಿ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ ದಾಸರಹಳ್ಳಿ, ಪ್ರೌಢಶಿಕ್ಷಣ ಕೊರಟಗೆರೆಯಲ್ಲಿ ಪಡೆದುಕೊಂಡ  ಇವರು ಶಿಕ್ಷಕ ತರಬೇತಿಯನ್ನು ಕೊರಟಗೆರೆ ಕಾಲೇಜಿನಲ್ಲಿ ಪೂರೈಸಿದರು.
ದಿನಾಂಕ:02-12-1999 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟ್ಟಗೆರೆ ಗ್ರಾಮದಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಸುಮಾರು 24 ವರ್ಷಗಳ ಸೇವೆಯನ್ನು ಒಂದೇ  ಶಾಲೆಯಲ್ಲಿ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

6.ಶ್ರೀಮತಿ ಶಾರದಮ್ಮ ರವರು.
ಸಹ ಶಿಕ್ಷಕರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದನಹಳ್ಳಿ.
ಮಧುಗಿರಿ ತಾಲೂಕಿನ ಹೊನ್ನಾಪುರ ಗ್ರಾಮದ ಹನುಮಂತರಾಯಪ್ಪ ಮತ್ತು ಪುಟ್ಟತಾಯಮ್ಮ ದಂಪತಿಗಳ   ಪುತ್ರಿಯಾಗಿ ದಿನಾಂಕ:-01-06-1963 ರಂದು ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಪುರ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ನೇರಳೆಕೆರೆ, ಪಿ ಯು ಸಿ ಶಿಕ್ಷಣವನ್ನು ಮಧುಗಿರಿ, ಶಿಕ್ಷಕರ ತರಬೇತಿಯನ್ನು ತುಮಕೂರಿನಲ್ಲಿ ಪಡೆದುಕೊಂಡರು. ದಿನಾಂಕ:-09-12-1998 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮ್ಮನಕೋಟೆ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಗಂಜಗುಂಟೆ ಶಾಲೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ 2013 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದನಹಳ್ಳಿ ಶಾಲೆ ವರ್ಗಾವಣೆ ಹೊಂದಿದರು. ಸದರಿ ಶಾಲೆಯಲ್ಲಿ 10 ವರ್ಷಗಳ ಕಾಲ  ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

7. ಶ್ರೀಮತಿ ನಾಗರತ್ನಮ್ಮ ರವರು
ಸಹ ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದೇನಹಳ್ಳಿ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಲಿಂಗಪ್ಪ ಮತ್ತು ಲಕ್ಷ್ಮಮ್ಮ ರವರ ಮಗಳಾಗಿ ದಿನಾಂಕ:01-06-1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕೊರಟಗೆರೆಯಲ್ಲಿ ಪಡೆದುಕೊಂಡರು. ಶಿಕ್ಷಕರ ತರಬೇತಿಯನ್ನು ಚನ್ನಪಟ್ಟಣದಲ್ಲಿ ಪಡೆದುಕೊಂಡ  ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಾಗಲವಾಡಿ ಶಾಲೆಯಲ್ಲಿ ದಿನಾಂಕ:-13-08-1993 ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು.1997 ಸಪ್ಪಗಾನಹಳ್ಳಿ ಶಾಲೆಗೆ ವರ್ಗಾವಣೆ ಹೊಂದಿದರು, ತುಮಕೂರು ತಾಲೂಕಿನ ಅರೇಪಾಳ್ಯ, ರಾಮಕೃಷ್ಣಪುರ, ನೆಲಮಂಗಲ ತಾಲೂಕಿನಲ್ಲಿ ತಡಸೀಘಟ್ಟ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ  ಇವರು ಪ್ರಸುತ್ತ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

8. ಶ್ರೀ ಅಂಜನಮೂರ್ತಿ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಕೊಡಿಗೇನಹಳ್ಳಿ.
ಕೊರಟಗೆರೆ ತಾಲೂಕಿನ ಕ್ಯಾಶವಾರ ಗ್ರಾಮದ  ಸಂಜೀವಪ್ಪ ಮತ್ತು ಕೆಂಪಮ್ಮ ದಂಪತಿಗಳ ಮಗನಾಗಿ ದಿನಾಂಕ:-01-06-1963 ರಲ್ಲಿ ಜನಿದರು. 
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದುಕೊಂಡರು,8 ನೇ & 9 ನೇ ತರಗತಿಯ ಶಿಕ್ಷಣವನ್ನು ಮಂಡ್ಯ ದಲ್ಲಿ ಪಡೆದು 10 ನೇ ತರತಿಯನ್ನು ಅಕ್ಕಿರಾಂಪುರ ಪ್ರೌಢಶಾಲೆಯಲ್ಲಿ ಪೂರೈಸಿದರು, ಪದವಿ ಶಿಕ್ಷಣ ಮಧುಗಿರಿ, ಶಿಕ್ಷಕರ ತರಬೇತಿಯನ್ನು ಕೊರಟಗೆರೆಯಲ್ಲಿ ಪಡೆದ ಇವರು ಪಾವಗಡ ತಾಲೂಕಿನ  ಎ ಹೆಚ್ ಪಾಳ್ಯ ಶಾಲೆಯಲ್ಲಿ ದಿನಾಂಕ:-04-07-1994 ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಮಧುಗಿರಿ ತಾಲೂಕಿನ ಕಡಗತ್ತೂರು, ಸುದ್ದೇಗುಂಟೆ,ಹೊಸಹಳ್ಳಿ, ಹಂದ್ರಾಳು, ಸಂಕಾಪುರ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ  ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಕಳೆದ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದರು. 
 ಶಿಕ್ಷಕ ವೃತ್ತಿಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

9. ಶ್ರೀ ಶ್ರೀನಿವಾಸಯ್ಯ ರವರು.
ಸಹ ಶಿಕ್ಷರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಪಾಳ್ಯ.

ಜನ್ಮ ಸ್ಥಳ :- ಚಂದ್ರಗಿರಿ. ಮಧುಗಿರಿ ತಾ||
ಜನ್ಮ ದಿನಾಂಕ :20-05-1963
ತಂದೆ : ಗೋವಿಂದಯ್ಯ
ತಾಯಿ:- ಯಲ್ಲಮ್ಮ.
ಪ್ರಾಥಮಿಕ ಶಿಕ್ಷಣ : ಸ.ಹಿ.ಪ್ರಾ.ಶಾಲೆ ದಂಡಿನದಿಬ್ಬ.
ಪ್ರೌಢಶಾಲಾ ಶಿಕ್ಷಣ : ಶ್ರೀ ಗುರುದೇವ ಗ್ರಾಮಾಂತರ ಪ್ರೌಢಶಾಲೆ ದಂಡಿನದಿಬ್ಬ.
ಶಿಕ್ಷಕ ತರಬೇತಿ :  ಸ.ಪ.ಪೂ.ಕಾಲೇಜು, ಕೊರಟಗೆರೆ ತಾ||




                                         




 




 ರಾಜ್ಯದ ಸರ್ವ ಶಿಕ್ಷಕರಿಗೆ ಸುವರ್ಣ ಅವಕಾಶ :-ನಿಮ್ಮ ವೃತ್ತಿ ಬದುಕಿನಲ್ಲಿ ಒಮ್ಮೆ ಮಾತ್ರ................. ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ,* ಮೈಸೂರು..... Central Institute of Indian Languages.. Mysure 


ಈ ಮೂಲಕ ರಾಜ್ಯದ ಸರಕಾರಿ,ಅನುದಾನಿತ ಮತ್ತು ಅನುದಾನರಹಿತ ಶಾಲೆಯ ಎಲ್ಲಾ ಶಿಕ್ಷಕ ವೃತ್ತಿ ಬಂಧುಗಳಿಗೆ ತಿಳಿಯಪಡಿಸುವುದೇನೆಂದರೆ  ದಕ್ಷಿಣ ಭಾರತದ ಮೂರು ಭಾಷೆಗಳಾದ ತಮಿಳು,ತೆಲುಗು ಮತ್ತು ಮಲಯಾಳಂ ಭಾಷೆಗಳನ್ನು ಕಲಿಯಲು  ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆ ಮೈಸೂರು.. ಇಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ವಸತಿ ಸಹಿತ ತರಬೇತಿಯನ್ನು ಪಡೆದುಕೊಳ್ಳಲು ಒಂದು ಉತ್ತಮವಾದ ಅವಕಾಶವನ್ನು ಮಾಡಿಕೊಟ್ಟಿದೆ. 


*ಸರಕಾರಿ ಮತ್ತು ಅನುದಾನಿತ ಶಿಕ್ಷಕರಿಗೆ ವೇತನ ಸಹಿತ ವಸತಿ ವ್ಯವಸ್ಥೆಯೊಂದಿಗೆ ತರಬೇತಿಯನ್ನು ನೀಡುತ್ತಾರೆ. 


*ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಗೌರವ ಧನವನ್ನು (ಸ್ಟ್ಯಾಯಿಫಂಡ್) ಕೊಡಲಾಗುತ್ತದೆ. 


*ತರಬೇತಿಯ ಕಾಲಾವಧಿ 10 ತಿಂಗಳು ಇರುತ್ತದೆ.


ತರಬೇತಿಯನ್ನು ಪಡೆದ ನಂತರ ತಾವುಗಳು ಯಾವ ರಾಜ್ಯದ ಭಾಷೆಯನ್ನು ಕಲಿಯುತ್ತಿರೋ ಆ  ರಾಜ್ಯಕ್ಕೆ 15 ದಿವಸಗಳ ಉಚಿತ ಪ್ರವಾಸ ಮಾಡಲು ಅವಕಾಶ ಕಲ್ಪಿಸಿದ್ದಾರೆ.


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ *15.05.2023 ಇರುತ್ತದೆ .


 ಆದ್ದರಿಂದ ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಪಡೆಯಲು ಇದೇ ಭಾನುವಾರ  07.05.2023 ರಂದು ಸಂಜೆ 4:00 ಗಂಟೆಗೆ  Teams App ಮೂಲಕ Online ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಈ ಸಭೆಗೆ ಭಾರತೀಯ ಭಾಷೆಗಳ ಕೇಂದ್ರೀಯ ಸಂಸ್ಥೆಯ.. ಉಪನ್ಯಾಸಕರಾದ S. TamilSelvam sir ಆಗಮಿಸಿ ಎಲ್ಲಾ ಮಾಹಿತಿ ನೀಡಲಿದ್ದಾರೆ,ಈ ಸಭೆಗೆ ಸರ್ಕಾರಿ , ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಕಿರಿಯ /ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆ ಗಳ ಎಲ್ಲಾ ಶಿಕ್ಷಕರು  ಈ ಆನ್ಲೈನ್ ಸಭೆಯಲ್ಲಿ ಭಾಗವಹಿಸಿ ಉಳಿದ ಎಲ್ಲಾ ಮಾಹಿತಿಗಳನ್ನು ಪಡೆದು  ಇದರ ಹೆಚ್ಚಿನ ಲಾಭವನ್ನು ಪಡೆಯಲು ತಿಳಿಸಲಾಗಿದೆ. 


                          ಸ್ವಾಗತ ಕೋರುವವರು

ಸಮಾಜ ಸೇವೆ ಮತ್ತು ಆರೋಗ್ಯ ಶಿಕ್ಷಣ ಸೇವೆ ವೇದಿಕೆ.. ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ (ರಿ) ಮೈಸೂರು.

MICROSOFT TEAM APP DOWNLOAD HERE.


            Q R CODE SCAN  ಮಾಡು ಮೂಲಕ app DOWNLOAD ಮಾಡಿಕೊಳ್ಳಿ.   



SSLC Result-2023








                        ಕರ್ನಾಟಕ  ರಾಜ್ಯದ 2023 ನೇ ಸಾಲಿನ SSLC ಪರೀಕ್ಷೆಯ ಫಲಿತಾಂಶ ದಿನಾಂಕ: 08-05-2023 ರಂದು 10-00 ಗಂಟೆಗೆ ಪ್ರಕಟಣೆಯಾಗಿದ್ದು ಫಲಿತಾಂಶ ನೋಡಲು ಈ ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ.



     


S S L C RESULT-2023 CLICK HERE.


             How To Check Result Online

Students will be able to check their SSLC Result 2023 Karnataka online by following the below-mentioned steps:

  • Log onto the official websites — karresults.nic.in or kseab.kar.nic.in
  • Click on the link for Karnataka SSLC Class 10 Result 2023 on the homepage
  • Input your details such as roll number
  • Your SSLC result 2023 will be displayed on the screen
  • Download the SSLC Result 2023  Karnataka and take a printout of the same
  • Students must secure the Karnataka SSLC Result 2023 provisional marksheet for immediate references.

  • How To Check Karnatak 2023  SSLC Result Via SMS

  • Sometimes the official websites are down due to heavy traffic soon after the results are declared. In such a case, students can also check their results via SMS. For the same, they can follow the steps mentioned below:

    1. Open the messaging app on the mobile phone
    2. Type KSEAB10 (Roll Number)
    3. Send it to 56263
    4. SSLC Result 2023 Karnataka will be sent on the same mobile number
    5. Students must secure a screenshot of the KSEAB SSLC Result 2023 for future references

7 th Pay Calculator.