May 2023

ಮೇ 2023 ಮಾಹೆಯಲ್ಲಿ ಮಧುಗಿರಿ ತಾಲೂಕಿನ ನಿವೃತ್ತ ಶಿಕ್ಷಕರ ಮಾಹಿತಿ.



ಸುದೀರ್ಘ ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಮಧುಗಿರಿ ತಾಲೂಕಿನ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ….

1. ಶ್ರೀಮತಿ ರಂಗಮ್ಮ ರವರು 
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಕೆಆರ್ ಬಡಾವಣೆ ಮಧುಗಿರಿ.
ಶ್ರೀಮತಿ ರಂಗಮ್ಮ ಎಮ್ / ಶ್ರೀ ರಾಮಚಂದ್ರಪ್ಪ  ಮುಖ್ಯ ಶಿಕ್ಷಕಿಯರು ಇವರು ಮಧುಗಿರಿ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ದಿನಾಂಕ:01-06-1963 ರಂದು ಜನಿಸಿದರು, ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ನೇರಳೆಕೆರೆ ಗ್ರಾಮದ ಶ್ರೀ ರಂಗನಾಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಪಡೆದುಕೊಂಡರು, ಮಧುಗಿರಿಯ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿ ಓದಿದರು, ಐಟಿಸಿ ಶಿಕ್ಷಣವನ್ನು ತುಮಕೂರಿನಲ್ಲಿ ಪಡೆದು ಪದವಿ ಶಿಕ್ಷಣವನ್ನು ಸಿದ್ದಗಂಗಾ ಮಹಿಳಾ ಕಾಲೇಜಿನಲ್ಲಿ ಪಡೆದುಕೊಂಡರು.
 ಇವರು ದಿನಾಂಕ:28-09-1984 ರಲ್ಲಿ ಮಧುಗಿರಿ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹರಿಹರಪುರ ಶಾಲೆಯಲ್ಲಿ ಸರ್ಕಾರಿ ಸೇವೆ ಸೇರಿಕೊಂಡು ನಂತರ ಗಂಜಲಗುಂಟೆ, ಪ್ರಧಾನ ಸರ್ಕಾರಿ ಹಿರಿಯ ಬಾಲಕಿಯರ ಶಾಳೆ ಮಧುಗಿರಿಯ ಶಾಳೆಗಳಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ  ಇವರು ಅವರಗಲ್ಲು ಶಾಲೆಗೆ ಮುಖ್ಯ ಶಿಕ್ಷಕಿಯಾಗಿ ಬಡ್ತಿ ಪಡೆದುಕೊಂಡರು, 2006  ಬಿ ಆರ್ ಪಿ ಯಾಗಿ ಸುಮಾರು ಆರು ವರ್ಷಗಳ ಕಾಲ ಸೇವೆ ಸಲ್ಲಿಸಿದರು ನಂತರ ಸ.ಹಿ.ಪ್ರಾ.ಶಾಲೆ ಬಡಿಗೊಂಡನಹಳ್ಳಿ ಶಾಲೆಗೆ ಬೋಧನಾ ವೃತ್ತಿಗೆ ಮರಳಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ಮತ್ತೇ  ಮಧುಗಿರಿ ಟೌನ್ಸಿ  ಆರ್ ಪಿ ಯಾಗಿ ಸುಮಾರು ನಾಲ್ಕು ವರ್ಷಗಳ ಸೇವೆ ಮಾಡಿದ  ಇವರು 2018 ರಲ್ಲಿ ಪುನಃ ಬೋಧನಾ ವೃತ್ತಿಗೆ  ಮಧುಗಿರಿ ಪಟ್ಟಣದ ಕೆ ಆರ್ ಬಡಾವಣೆ ಬಾಲಕಿಯರ ಶಾಲೆಗೆ ತೆರಳಿದರು. ಶಿಕ್ಷಕ ವೃತ್ತಿಯಲ್ಲಿ ಸುಮಾರು 39 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.


2. ಶ್ರೀ ರಂಗನಾಥ್ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಲಮಾಚಿ.
ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ಚಿಕ್ಕಮರಿಯಪ್ಪ ಹಾಗೂ ಭೈರಮ್ಮ ದಂಪತಿಗಳ ಏಕೈಕ ಪುತ್ರನಾಗಿ 01-06-1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಮತ್ತು ಪ್ರೌಢ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪೂರೈಸಿದ ಇವರು ಪಿ ಯು ಸಿ ಶಿಕ್ಷಣವನ್ನು ಮಧುಗಿರಿ,  ಶಿಕ್ಷಕರ ತರಬೇತಿಯನ್ನು ಸಿದ್ದಗಂಗಾ ಮಠದಲ್ಲಿ ತುಮಕೂರು ಪಡೆದುಕೊಂಡರು,  ಪದವಿ ಶಿಕ್ಷಣವನ್ನು ಟಿ ವಿ ವಿ ಶಿಕ್ಷಣ ಸಂಸ್ಥೆ ಮಧುಗಿರಿಯಲ್ಲಿ ಪಡೆದುಕೊಂಡರು.
ದಿನಾಂಕ:18-08-1993 ರಲ್ಲಿ ಸ.ಕಿ.ಪ್ರಾ.ಶಾಲೆ ವೆಂಗಳಮ್ಮನಹಳ್ಳಿ ಸರ್ಕಾರಿ ಸೇವೆ ಸೇರಿಕೊಂಡು 3 ವರ್ಷಗಳ ಕಾಲ ಸೇವೆ ಸಲ್ಲಿಸಿ 1996 ರಲ್ಲಿ ಸ.ಹಿ.ಪ್ರಾ.ಶಾಲೆ ಚೀಲನಹಳ್ಳಿ ಶಾಲೆಗೆ ವರ್ಗಾವಣೆ ಹೊಂದಿದರು ನಂತರ ಸ.ಕಿ.ಪ್ರಾ.ಶಾಲೆ ಕಾರೇನಹಳ್ಳಿ ಶಾಲೆಯಲ್ಲಿ 18 ವರ್ಷಗಳ ಸೇವೆ ಸಲ್ಲಿಸಿ 2020 ರಲ್ಲಿ ಮುಖ್ಯ ಶಿಕ್ಷಕರಾಗಿ ಪ್ರಸುತ್ತ ಶಾಲೆ ಬಡ್ತಿ ಹೊಂದಿದರು. 
ಸುಮಾರು 30 ವರ್ಷಗಳ ಕಾಲ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುತ್ತಾ ರಂಗಭೂಮಿ ಕಲಾವಿದರಾಗಿಯೂ ತಮ್ಮನ್ನು ತೊಡಗಿಸಿಕೊಂಡ  ಇವರು  ಭೀಮ.ದಶರಥ, ದುರ್ಯೋಧನ  ಪಾತ್ರಗಳಲ್ಲಿ ಕಲಾ ಸೇವೆಯನ್ನು ಸಲ್ಲಿಸುತ್ತಾ "ಭೀಮ"ನ ಪಾತ್ರಕ್ಕಾಗಿ 'ಬೆಳ್ಳಿ ಕಿರೀಟ' ಪಡೆದುಕೊಂಡಿದ್ದಾರೆ. ಜಿಲ್ಲಾ ಮಟ್ಟದ ರಂಗಭೂಮಿ ಕಲಾವಿದರ ಸಂಘದ ಪ್ರಶಸ್ತಿ, ಕಲಾ ಪ್ರಶಸ್ತಿ, ತಾಲೂಕು ಮಟ್ಟದ ಕನ್ನಡ ರಾಜ್ಯೋತ್ತವ ಪ್ರಶಸ್ತಿಯನ್ನು 2019 ರಲ್ಲಿ ಪಡೆದಿದ್ದಾರೆ.
ಶಿಕ್ಷಕ ವೃತ್ತಿಯಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.
                     

3.ಶ್ರೀ ಗೋಪಾಲ್ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಂಡವಾಡಿ.
ಶ್ರೀ ಗೋಪಾಲ್  ಮುಖ್ಯ ಶಿಕ್ಷಕರು ಇವರು ಕೊರಟಗೆರೆ ತಾಲೂಕಿನ ಅರಸಾಪುರ ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ಮಗನಾಗಿ ದಿನಾಂಕ:-01-06-1963 ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ಚಗ್ರಾಮದಲ್ಲಿ ಪೂರೈಸಿದರು,ಪ್ರೌಢಶಾಲಾ ಶಿಕ್ಷಣವನ್ನು ಹೊಳವನಹಳ್ಳಿ ಪಡೆದುಕೊಂಡರು. ಪಿ ಯು ಸಿ ಶಿಕ್ಷಣವನ್ನು ಮಧುಗಿರಿ ಶಿಕ್ಷಕರ ತರಬೇತಿಯನ್ನು ತುಮಕೂರಿನ ಹೆಗ್ಗರೆಯ ಸಿದ್ದಾರ್ಥ ನಗರದ ಕಾಲೇಜಿನಲ್ಲಿ ಪಡೆದುಕೊಂಡರು.
ದಿನಾಂಕ;-01-08-1989 ರಲ್ಲಿ ರಾಮನಗರ ತಾಲೂಕಿನ ಗಾಣಕಲ್ಲು ಗ್ರಾಮದ ಶಾಲೆಯಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದರು, ನಂತರ ಕುಣಿಗಲ್ ತಾಲೂಕಿನ ಕುರುಪಾಳ್ಯ ಶಾಲೆಯಲ್ಲಿ ಮೂರು ವರ್ಷಗಳ ಸೇವೆ ಸಲ್ಲಿಸಿ ಮಧುಗಿರಿ ತಾಲೂಕಿನ ಭೈರವನಗರ ಕಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸುಮಾರು 20 ವರ್ಷಗಳ ಸೇವೆ ಸಲ್ಲಿಸಿದರು.ನಂತರ ಬಟ್ಟಗೆರೆ ಗ್ರಾಮದಲ್ಲಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಶಿಕ್ಷಕರಾಗಿ ಕೊಂಡವಾಡಿ ಶಾಲೆಗೆ ಬಡ್ತಿ ಹೊಂದಿದರು.
ಶಿಕ್ಷಕ ವೃತ್ತಿಯಲ್ಲಿ ಸುಮಾರು 34 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.

4. ಶ್ರೀ ಪ್ರಕಾಶ್ ರವರು.
ಮುಖ್ಯ ಶಿಕ್ಷಕರು.
ಕರ್ನಾಟಕ ಪಬ್ಲಿಕ್ ಶಾಲೆ ಮಿಡಿಗೇಶಿ, ಮಧುಗಿರಿ ತಾಲೂಕು
ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಕೆ ಬಸವನಹಳ್ಳಿ ಗ್ರಾಮದ ಜಿ.ಸಿ ಚಿಕ್ಕಚೌಡಪ್ಪ ಹಾಗೂ ದ್ಯಾವಮ್ಮ ದಂಪತಿಗಳ ಮಗನಾಗಿ ದಿನಾಂಕ:01-06-1963 ರಲ್ಲಿ ಜನಿಸಿದರು. ಕಿರಿಯ ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪಡೆದು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಕಾರ್ಪೇನಹಳ್ಳಿ ಪಡೆದರು, ಪ್ರೌಢಶಾಲಾ ಶಿಕ್ಷಣವನ್ನು ಮಧುಗಿರಿಯಲ್ಲಿ ಪಡೆದು ಪಿ ಯು ಸಿ ಮತ್ತು ಪದವಿ ಶಿಕ್ಷಣವನ್ನು ಬೆಂಗಳೂರಿನ ವಿವಿ ಪುರಂನ ಸಂಜೆ ಕಾಲೇಜಿನಲ್ಲಿ ಪೂರೈಸಿದರು.
ದಿನಾಂಕ:20-08-1993 ರಲ್ಲಿ ಸ.ಹಿ.ಪ್ರಾ.ಶಾಲೆ ನಾಗೇನಹಳ್ಳಿ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ  ಇವರು ಮುಂದೆ ಎಮ್ ಗೊಲ್ಲರಹಟ್ಟಿ, ಆರ್ ಗೊಲ್ಲರಹಟ್ಟಿ, ಎಮ್ ಗೊಲ್ಲರಹಟ್ಟಿ(ಕಸಬಾ ಹೋ), ಸೋಗೆನಹಳ್ಳಿ ಶಾಲೆಗಳಲ್ಲಿ ಸೇವೆ ಸಲ್ಲಿಸಿ, ಕಳೆದ ಸಾಲಿನಲ್ಲಿ ಪ್ರಸುತ್ತ ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದುಕೊಂಡರು.
            ಶಿಕ್ಷಕ ವೃತ್ತಿಯಲ್ಲಿ ಸುಮಾರು 30 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಇಲಾಖೆಯ ವತಿಯಿಂದ ಅಭಿನಂದನೆಗಳು ಸಲ್ಲಿಸುತ್ತಾ ನಿವೃತ್ತ ಜೀವನ ಸುಖಮಯವಾಗಿರಲೆಂದು ಪ್ರಾರ್ಥಿಸುತ್ತೇವೆ.

5. ಶ್ರೀ ರಾಮಕೃಷ್ಣ ಜಿ.ಎನ್.ರವರು
ಸಹ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟ್ಟಗೆರೆ.
ಕೊರಟಗೆರೆ ತಾಲೂಕಿನ ಗರಗದೊಡ್ಡಿ ಗ್ರಾಮದ  ನಾಗಪ್ಪ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ದಿನಾಂಕ:01-06-1963 ರಂದು ಜನಿಸಿದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗರಗದೊಡ್ಡಿ ಶಾಲೆಯಲ್ಲಿ ಕಿರಿಯ ಪ್ರಾಥಮಿಕ ಶಿಕ್ಷಣ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣ ದಾಸರಹಳ್ಳಿ, ಪ್ರೌಢಶಿಕ್ಷಣ ಕೊರಟಗೆರೆಯಲ್ಲಿ ಪಡೆದುಕೊಂಡ  ಇವರು ಶಿಕ್ಷಕ ತರಬೇತಿಯನ್ನು ಕೊರಟಗೆರೆ ಕಾಲೇಜಿನಲ್ಲಿ ಪೂರೈಸಿದರು.
ದಿನಾಂಕ:02-12-1999 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಟ್ಟಗೆರೆ ಗ್ರಾಮದಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿ ಸುಮಾರು 24 ವರ್ಷಗಳ ಸೇವೆಯನ್ನು ಒಂದೇ  ಶಾಲೆಯಲ್ಲಿ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

6.ಶ್ರೀಮತಿ ಶಾರದಮ್ಮ ರವರು.
ಸಹ ಶಿಕ್ಷಕರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದನಹಳ್ಳಿ.
ಮಧುಗಿರಿ ತಾಲೂಕಿನ ಹೊನ್ನಾಪುರ ಗ್ರಾಮದ ಹನುಮಂತರಾಯಪ್ಪ ಮತ್ತು ಪುಟ್ಟತಾಯಮ್ಮ ದಂಪತಿಗಳ   ಪುತ್ರಿಯಾಗಿ ದಿನಾಂಕ:-01-06-1963 ರಂದು ಜನಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಪುರ ಗ್ರಾಮದಲ್ಲಿ,ಪ್ರೌಢ ಶಿಕ್ಷಣವನ್ನು ನೇರಳೆಕೆರೆ, ಪಿ ಯು ಸಿ ಶಿಕ್ಷಣವನ್ನು ಮಧುಗಿರಿ, ಶಿಕ್ಷಕರ ತರಬೇತಿಯನ್ನು ತುಮಕೂರಿನಲ್ಲಿ ಪಡೆದುಕೊಂಡರು. ದಿನಾಂಕ:-09-12-1998 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಮ್ಮನಕೋಟೆ ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಗಂಜಗುಂಟೆ ಶಾಲೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ 2013 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದನಹಳ್ಳಿ ಶಾಲೆ ವರ್ಗಾವಣೆ ಹೊಂದಿದರು. ಸದರಿ ಶಾಲೆಯಲ್ಲಿ 10 ವರ್ಷಗಳ ಕಾಲ  ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

7. ಶ್ರೀಮತಿ ನಾಗರತ್ನಮ್ಮ ರವರು
ಸಹ ಶಿಕ್ಷಕರು
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾದೇನಹಳ್ಳಿ.
ತುಮಕೂರು ಜಿಲ್ಲೆಯ ಕೊರಟಗೆರೆ ಪಟ್ಟಣದ ಲಿಂಗಪ್ಪ ಮತ್ತು ಲಕ್ಷ್ಮಮ್ಮ ರವರ ಮಗಳಾಗಿ ದಿನಾಂಕ:01-06-1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕೊರಟಗೆರೆಯಲ್ಲಿ ಪಡೆದುಕೊಂಡರು. ಶಿಕ್ಷಕರ ತರಬೇತಿಯನ್ನು ಚನ್ನಪಟ್ಟಣದಲ್ಲಿ ಪಡೆದುಕೊಂಡ  ಇವರು ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹಾಗಲವಾಡಿ ಶಾಲೆಯಲ್ಲಿ ದಿನಾಂಕ:-13-08-1993 ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು.1997 ಸಪ್ಪಗಾನಹಳ್ಳಿ ಶಾಲೆಗೆ ವರ್ಗಾವಣೆ ಹೊಂದಿದರು, ತುಮಕೂರು ತಾಲೂಕಿನ ಅರೇಪಾಳ್ಯ, ರಾಮಕೃಷ್ಣಪುರ, ನೆಲಮಂಗಲ ತಾಲೂಕಿನಲ್ಲಿ ತಡಸೀಘಟ್ಟ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ  ಇವರು ಪ್ರಸುತ್ತ ಶಾಲೆಯಲ್ಲಿ ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

8. ಶ್ರೀ ಅಂಜನಮೂರ್ತಿ ರವರು.
ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಕೊಡಿಗೇನಹಳ್ಳಿ.
ಕೊರಟಗೆರೆ ತಾಲೂಕಿನ ಕ್ಯಾಶವಾರ ಗ್ರಾಮದ  ಸಂಜೀವಪ್ಪ ಮತ್ತು ಕೆಂಪಮ್ಮ ದಂಪತಿಗಳ ಮಗನಾಗಿ ದಿನಾಂಕ:-01-06-1963 ರಲ್ಲಿ ಜನಿದರು. 
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದುಕೊಂಡರು,8 ನೇ & 9 ನೇ ತರಗತಿಯ ಶಿಕ್ಷಣವನ್ನು ಮಂಡ್ಯ ದಲ್ಲಿ ಪಡೆದು 10 ನೇ ತರತಿಯನ್ನು ಅಕ್ಕಿರಾಂಪುರ ಪ್ರೌಢಶಾಲೆಯಲ್ಲಿ ಪೂರೈಸಿದರು, ಪದವಿ ಶಿಕ್ಷಣ ಮಧುಗಿರಿ, ಶಿಕ್ಷಕರ ತರಬೇತಿಯನ್ನು ಕೊರಟಗೆರೆಯಲ್ಲಿ ಪಡೆದ ಇವರು ಪಾವಗಡ ತಾಲೂಕಿನ  ಎ ಹೆಚ್ ಪಾಳ್ಯ ಶಾಲೆಯಲ್ಲಿ ದಿನಾಂಕ:-04-07-1994 ರಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ನಂತರ ಮಧುಗಿರಿ ತಾಲೂಕಿನ ಕಡಗತ್ತೂರು, ಸುದ್ದೇಗುಂಟೆ,ಹೊಸಹಳ್ಳಿ, ಹಂದ್ರಾಳು, ಸಂಕಾಪುರ ಶಾಲೆಗಳಲ್ಲಿ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ  ಇವರು ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆಗೆ ಕಳೆದ ಸಾಲಿನಲ್ಲಿ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿದರು. 
 ಶಿಕ್ಷಕ ವೃತ್ತಿಯಲ್ಲಿ 29 ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.

9. ಶ್ರೀ ಶ್ರೀನಿವಾಸಯ್ಯ ರವರು.
ಸಹ ಶಿಕ್ಷರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹೊಸಪಾಳ್ಯ.

ಜನ್ಮ ಸ್ಥಳ :- ಚಂದ್ರಗಿರಿ. ಮಧುಗಿರಿ ತಾ||
ಜನ್ಮ ದಿನಾಂಕ :20-05-1963
ತಂದೆ : ಗೋವಿಂದಯ್ಯ
ತಾಯಿ:- ಯಲ್ಲಮ್ಮ.
ಪ್ರಾಥಮಿಕ ಶಿಕ್ಷಣ : ಸ.ಹಿ.ಪ್ರಾ.ಶಾಲೆ ದಂಡಿನದಿಬ್ಬ.
ಪ್ರೌಢಶಾಲಾ ಶಿಕ್ಷಣ : ಶ್ರೀ ಗುರುದೇವ ಗ್ರಾಮಾಂತರ ಪ್ರೌಢಶಾಲೆ ದಂಡಿನದಿಬ್ಬ.
ಶಿಕ್ಷಕ ತರಬೇತಿ :  ಸ.ಪ.ಪೂ.ಕಾಲೇಜು, ಕೊರಟಗೆರೆ ತಾ||




                                         




 



7 th Pay Calculator.