2023 ರ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರು.



"ಜೀವನ ಹಾಗೂ ಸಮಯ 
ಈ ವಿಶ್ವದ ಬಹುದೊಡ್ಡ ಶಿಕ್ಷಕರು.
ಜೀವನ ಸಮಯದ ಸದುಪಯೋಗ ಕಲಿಸಿದರೆ,
ಸಮಯ ಬದುಕಿನ  ಮೌಲ್ಯ ತಿಳಿಸುತ್ತದೆ."
 2023 ರ ಸೆಪ್ಟೆಂಬರ್ ತಿಂಗಳಲ್ಲಿ ನಿವೃತ್ತಿಯಾಗುತ್ತಿರುವ ಶಿಕ್ಷಕರ ಕಿರು ಪರಿಚಯ.

 ಶ್ರೀಮತಿ ಜಿ.ಬಿ.ಕಮಲಮ್ಮ ನವರು.
ಸಹ ಶಿಕ್ಷಕಿ, 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜಡೆಗೊಂಡನಹಳ್ಳಿ.

       ಚಿತ್ರದುರ್ಗ ಜಿಲ್ಲೆಯ ಹುಳಿಯಾರು ತಾಲೂಕಿನ  ಗುಬ್ಬಿಹಳ್ಳಿ ಗ್ರಾಮದ ಟಿ.ಭೀಮಯ್ಯ ಹಾಗೂ ಗೌರಮ್ಮ ದಂಪತಿಗಳ ಮೂರನೇಯ ಮಗಳಾಗಿ ದಿನಾಂಕ :11-09-1963 ರಂದು ಜನಿಸಿದರು.
   ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಸರ್ಕಾರಿ ಶಾಲೆಯಲ್ಲಿ ಪಡೆದುಕೊಂಡರು. ಹಿರಿಯ ಪ್ರಾಥಮಿಕ ಶಿಕ್ಷಣವನ್ನು ತಿಪಟೂರಿನ ಸರ್ಕಾರಿ ಶಾಲೆಯಲ್ಲಿ ಪಡೆದುಕೊಂಡರು, ಪ್ರೌಢ ಶಾಲಾ ಶಿಕ್ಷಣವನ್ನು ಮಧುಗಿರಿಯ ಸಿದ್ದಾರ್ಥ ಪ್ರೌಢಶಾಲೆಯಲ್ಲಿ ಪಡೆದರು. ನಂತರ ಪದವಿ ಪೂರ್ವ ಶಿಕ್ಷಣವನ್ನು ಮಧುಗಿರಿ ಪಟ್ಟಣದ ಅಂಬೇಡ್ಕರ್ ಕಾಲೇಜಿನಲ್ಲಿ ಪಡೆದುಕೊಂಡರು. 
    ವೃತ್ತಿ ತರಬೇತಿ ಶಿಕ್ಷಣವನ್ನು ತುಮಕೂರಿನ ಸಿದ್ದಗಂಗಾ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಪೂರೈಸಿದರು.
ದಿನಾಂಕ : 02-09-1993 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಳಬಾಗಿಲ ಪಾಳ್ಯ  ಶಾಳೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿದ  ಇವರು  2003 ರವರೆಗೆ ಸೇವೆಸಲ್ಲಿಸಿ ನಂತರ ಸ.ಕಿ.ಪ್ರಾ.ಶಾಲೆ ಭೂತನಹಳ್ಳಿ  ಶಾಲೆಯಲ್ಲಿ 2012 ರ ವರೆಗೆ ಸಲ್ಲಿಸಿದರು. ಆ ನಂತರ 2012 ರಿಂದ 2016 ರ ವರೆಗೆ  ಸ.ಕಿ.ಪ್ರಾ.ಶಾಲೆ ಸಂಜೀವಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದರು.2016 ರಿಂದ 2023 ರ 30 ಸೆಪ್ಟೆಂಬರ್ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡೇಗೊಂಡನಹಳ್ಳಿ ಶಾಲೆಯಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.


ಶ್ರೀ  ಸಿದ್ದಪ್ಪ ನವರು.
ಸಹ ಶಿಕ್ಷಕರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸಪುರ.
ಮಧುಗಿರಿ ತಾಲೂಕಿನ ಮಿಡಿಗೇಶಿ ಹೋಬಳಿಯ ಹನುಮಂತಪುರ ಗ್ರಾಮದ ತ್ಯಾಡಮಲ್ಲಯ್ಯ ಹಾಗೂ ನಿಂಗಮ್ಮ ದಂಪತಿಗಳ ಮಗನಾಗಿ ದಿನಾಂಕ : 22-09-1963 ರಂದು ಜನಿಸಿದರು. 
        ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಗ್ರಾಮದಲ್ಲಿ ಪೂರೈಸಿದರು, ಪ್ರೌಢ ಶಿಕ್ಷಣವನ್ನು ಮಿಡಿಗೇಶಿ ಪ್ರೌಢಶಾಲೆಯಲ್ಲಿ ಪಡೆದುಕೊಂಡರು.ಶಿಕ್ಷಕರ ತರಬೇತಿಯನ್ನು ತುಮಕೂರಿನ ಕಾಳಿದಾಸ ಕಾಲೇಜಿನಲ್ಲಿ ಪಡೆದುಕೊಂಡರು.
   ದಿನಾಂಕ : 08-09-1993 ರಲ್ಲಿ ಚಂದ್ರಭಾವಿ ಶಾಲೆಯಲ್ಲಿ ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು, ಸುಮಾರು ಏಳು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ  ಇವರು ನಂತರ  ಎಮ್ಮೆ ತಿಮ್ಮನಹಳ್ಳಿ ಶಾಲೆಯಲ್ಲಿ, ಪುಲಮಾಚಿ ಶಾಲೆಗಳಲ್ಲಿ ಸೇವೆ ಸಲ್ಲಿಸಿದ ಇವರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ರೀನಿವಾಸಪುರ ಶಾಲೆಯಲ್ಲಿ ಸುಮಾರು ಎಂಟು ವರ್ಷಗಳ ಕಾಲ ಸೇವೆ ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ.
    ಇವರುಗಳ ನಿವೃತ್ತಿ ಜೀವನ  ಆರೋಗ್ಯಕರವಾಗಿರಲಿ,ನೆಮ್ಮದಿಯಾಗಿರಲೆಂದು ದೇವರಲ್ಲಿ ಪ್ರಾರ್ಥಿಸುವೆ.






U-Dise+ 2023-24



UDISE+ - BASIC Profile Update for Schools
-----------------------------------------
Basic Profile Details Change is Opened for all States 
in UDISE+ School Directory Management for AY 2023-24.

All States/UTs are requested to Update/Verify Basic Profile Details of Schools through Admin Logins.

1) This facility will be available till 30th September 2023. And will not be extended till Last Day of Data Entry Like Every Year on request.
2) States must ensure to have Basic Profile Details updated for the Schools where change is required before Starting of Data Updation
in profile, teacher and Student module.
3) All District/Block MISs must be properly instructed by State to re-check/re-verify Basic Profile Details for all the Schools.
4) Schools which are not operational must be made Non-Operational in portal.
5) All Schools having more then 1(one) DISE code for different Sections or Mediums must be merged in 1(one) DISE code.


 

ಪ್ರಜಾಪ್ರಭುತ್ವ ದಿನದ ನೊಂದಣಿ.


*ಕರ್ನಾಟಕ ರಾಜ್ಯದ ಎಲ್ಲಾ ಶಾಲೆಗಳು ಪ್ರಜಾಪ್ರಭುತ್ವ ದಿನದ ಆಚರಣೆಗಾಗಿ ನೊಂದಣಿ ಮಾಡಲು ಈ ಕೆಳಗಿನ ಲಿಂಕ್ ಮೂಲಕ  ಭೇಟಿ ನೀಡಿ.

ಪ್ರಜಾಪ್ರಭುತ್ವ ದಿನದ ನೊಂದಣಿಗಾಗಿ Click ಮಾಡಿ 

ವಿವರಗಳುಳ್ಳ ಮಾಹಿತಿಗಾಗಿ .

7 th Pay Calculator.