ನಮ್ಮೊಳಗೊಬ್ಬ ಸಾಧಕರು, ಅವರಿಗೊಂದು ಸಲಾಂ.

ಆತ್ಮೀಯ ಸನ್ಮಿತ್ರರೇ ಇಂದು ನಾನು ಒಬ್ಬ ಸಾಧಕರನ್ನು ಪರಿಚಯಿಸುತ್ತಿದ್ದೇನೆ. ಇವರ ಸಾಧನೆ, ನಮ್ಮ ಆತ್ಮ ವಿಮರ್ಶೆಗೆ ದಾರಿಯಾಗಬಹುದು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬನಶಂಕರಿ ಎಂಬುದು ಪ್ರಖ್ಯಾತ ಪುಣ್ಯಕ್ಷೇತ್ರ. ತಾಯಿ ಬನಶಂಕರಿಯ ಮಡಿಲಲ್ಲಿ ವಲಸೆ ಬಂದ ಜನ ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಎಂದೂ ಚಿಂತಿಸಿರಲಿಲ್ಲ. ಶಿಕ್ಷಣ ಇಲಾಖೆ DPEP ಯೋಜನೆಯಡಿ 1998 ರಲ್ಲಿ ಅಲ್ಲಿನ ಮಕ್ಕಳಿಗೆ ಒಂದು ಸಣ್ಣ ಕೊಠಡಿಯಲ್ಲಿ ಶಾಲೆಯನ್ನ ಪ್ರಾರಂಭಿಸಿತು. ಆಗ ದಾಖಲಾತಿ ಕೇವಲ ಎಂಟು ಮಕ್ಕಳು..

ಈ ಶಾಲೆ ಒಂದು ಕೊಠಡಿಯಲ್ಲಿ ಕುಂಟುತ್ತ ಸಾಗಿ ಸರ್ವ ಶಿಕ್ಷಣ ಅಭಿಯಾನದಡಿ ಮತ್ತೊಂದು ಕೊಠಡಿಯನ್ನು ಪಡೆಯಿತು. 2016 ರ ನಂತರ ಶಾಲೆಯ ಚಿತ್ರಣವೇ ಬದಲಾಯಿತು. ಆಗ ಬಿಆರ್ಸಿ ಕಚೇರಿಯಲ್ಲಿ ಬಿಆರ್ಪಿ, ಸಿಆರ್ಪಿ ಹಾಗೆ ಕೆಲಸ ನಿರ್ವಹಿಸಿದಂತಹ ಶ್ರೀಮತಿ ಪಾರ್ವತಿಬಾಯಿ ಎನ್ ಚಳಗೇರಿ ಇವರು 2016ರಲ್ಲಿ ಸದರಿ ಶಾಲೆಯನ್ನು ಆಯ್ಕೆ ಮಾಡಿಕೊಂಡು ಈ ಶಾಲೆಗೆ ಬಂದರು. ಆಗ ದಾಖಲಾತಿ 13 ಅವೆಲ್ಲವೂ ವಲಸೆ ಮಕ್ಕಳೇ ಆಗಿದ್ದವು.. 
ಗಂಡು ಮಕ್ಕಳಿಗಲ್ಲದ ತನಗೆ ಈ ಶಾಲೆಯ ಮಕ್ಕಳೇ ಆಸ್ತಿ ಎಂಬಂತೆ ದುಡಿದರು. ನೋಡಲು ಅವ್ಯವಸ್ಥಿತವಾಗಿದ್ದ ಶಾಲೆ, ಸಂಜೆ ಆಗುತ್ತಿದ್ದಂತೆ ಕುಡುಕರ, ಅನೈತಿಕ ತಾಣವಾಗಿದ್ದ ಶಾಲೆಯ ಮೈದಾನ, ಇವೆಲ್ಲದಕ್ಕೂ ಒಂದು ಕಾಯಕಲ್ಪ ಕೊಟ್ಟರು. ಅದರ ಪರಿಣಾಮ ಹೇಗಿದೆ ಅಂದ್ರೆ ಪ್ರಸ್ತುತ ಸದರಿ ಶಾಲೆಯು ಯಾವುದೇ ಕಾನ್ವೆಂಟ್ ಶಾಲೆಗಿಂತ ಕಮ್ಮಿ ಇಲ್ಲ. ಪ್ರಸ್ತುತ ಹಿರಿಯ ಪ್ರಾಥಮಿಕ ಶಾಲೆ ಆಗಿರುವ ಈ ಶಾಲೆಯ ದಾಖಲಾತಿ ಸಂಖ್ಯೆ 87 ಆಗಿದೆ. 2020 ರಲ್ಲಿ ಸದರಿ ಶಾಲೆಗೆ ಸ್ವಚ್ಛ ವಿದ್ಯಾಲಯ ಪುರಸ್ಕಾರ  ರಾಜ್ಯ ಮಟ್ಟದ  ಪ್ರಶಸ್ತಿಯು ದೊರಕಿತು. ತಮ್ಮ 57ನೇ ವಯಸ್ಸಿನಲ್ಲಿ ಗ್ರಾಮೀಣ ಶಾಲೆಗಳ ಅಭಿವೃದ್ಧಿ ಕುರಿತಾದಂತಹ ವಿಷಯ ಮಂಡನೆಗೆ ಡಾಕ್ಟರೇಟ್ ಪ್ರಶಸ್ತಿಯನ್ನೂ ಪಡೆದರು. ಸಾರ್ವಜನಿಕ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಜಾರಿಗೆ ತಂದಂತಹ ಮಕ್ಕಳ ಡೈರಿಗೆ ಇವರ ಶಾಲೆಯ ಹೊರನೋಟದ ಚಿತ್ರವನ್ನು ಮುದ್ರಿಸಿತು.  ಮಾನ್ಯ ಆಯುಕ್ತರು, ಅಪರ ಆಯುಕ್ತರು ಇವರೆಲ್ಲರೂ ಈ ಶಾಲೆಗೆ ಭೇಟಿ ನೀಡಿದ್ದಾರೆ. ಇಲಾಖೆಯ ಉನ್ನತ ಐಎಎಸ್ ಅಧಿಕಾರಿಗಳು ಈ ಶಾಲೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇದನ್ನೆಲ್ಲಾ ಹಂಚಿಕೊಂಡ ಕಾರಣ ಇಷ್ಟೇ. ಸಾಮಾನ್ಯವಾಗಿ ಬಿಆರ್ಪಿ, ಸಿಆರ್ಪಿ,ಬಿಐಆರ್ಟಿ ಇತರೆ ಅನುಷ್ಠಾನಾಧಿಕಾರಿಗಳಾದ ನಾವು ನಮ್ಮ ಅವಧಿ ಪೂರ್ಣಗೊಂಡ ನಂತರ ಸಾಮಾನ್ಯವಾಗಿ ಕಡಿಮೆ ಮಕ್ಕಳು ಅಂದರೆ ಒಂದು, ಎರಡು ಮಕ್ಕಳಿರುವ ಉರ್ದು ಶಾಲೆಯಲ್ಲಿ ಕನ್ನಡ ಹುದ್ದೆಯನ್ನು ಬಯಸುತ್ತೇವೆ. ಇಲ್ಲದಿದ್ದಲ್ಲಿ ಕಾರ್ಯದ ಒತ್ತಡ ಇಲ್ಲದ ಎಲ್ ಪಿ ಎಸ್ ಅಥವಾ ನಮ್ಮ ಮಾತನ್ನೇ ಕೇಳುವ ಮಾತೆಯರೇ ಇರುವ ಶಾಲೆಯನ್ನು ಬಯಸುತ್ತೇವೆ.. ಈಗ ಅಧಿಕಾರದಲ್ಲಿದ್ದಾಗ ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ನಾವು, ನಮ್ಮ ಮಕ್ಕಳನ್ನು ಸಹ ಸರಕಾರಿ ಶಾಲೆಗೆ ಸೇರಿಸಲಾರೆವು. ಹೋಗಲಿ ಅವಧಿ ಪೂರ್ಣಗೊಂಡ ನಂತರವಾದರೂ ನಾವು ಪ್ರಯತ್ನಿಸುತ್ತೇವೆಯೇ??!!. ಹಿಂದಿನ ಹಾದಿ ಸಾಧನೆ ಆಗಲಿ ಮುಂದಿನ ಹಾದಿ/ಶಾಲೆಗಳು ಭರವಸೆಗಳಾಗಲಿ. ಆತ್ಮ ವಿಮರ್ಶೆ ನಮಗೆ ಬಿಟ್ಟದ್ದು..  
ನಾನು ಕಂಡಂತೆ ಎಷ್ಟೋ ಸಿಆರ್‌ಪಿ, ಬಿಆರ್ಪಿ, ಬಿಐಆರ್ಟಿ ಗಳು ತಾವು ಹೋದ ಶಾಲೆಗಳಲ್ಲಿ ಅಂದು ತಾವು ಹೇಳಿದ, ಹಂಚಿಕೊಂಡ ಕನಸುಗಳಲ್ಲಿ ಅರ್ಧದಷ್ಟನ್ನು ಸಾಧಿಸಿದರೆ ಆ ಶಾಲೆ ಸರ್ಕಾರಿ ಶಾಲೆ, ಉಳಿಯುತ್ತಿತ್ತು.. (ಕೆಲವರು ಇದಕ್ಕೆ ಅಪವಾದ. ಅವರ ಸಾಧನೆಯನ್ನು ಮೆಚ್ಚುವಂಥದ್ದು.  ಸರ್ಕಾರಿ ಶಾಲೆಗಳು ಉಳಿದಿದ್ದರೆ ಅಂತವರಿಂದ ಮಾತ್ರ ಸಾಧ್ಯ)
( ಸಂಗ್ರಹ :- ಜಗದೀಶ್ ಡಿ. ಸಿಆರ್ಪಿ. ಯಲ್ಕೂರು)

ಚಿತ್ರಗಳು.

























7 th Pay Calculator.