ಜೂನ್ 2023 ರಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಪರಿಚಯ.


 ಶಿಕ್ಷಣ ಇಲಾಖೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಬಾಳಿನ ಜ್ಯೋತಿ ಬೆಳಗಿಸಲು ಕಾರಣರಾದ ಪ್ರಾಥಮಿಕ ಶಾಲಾ ಶಿಕ್ಷಕರು ಇಂದು ಸೇವೆಯಿಂದ ನಿವೃತ್ತಿ ಹೊಂದುತ್ತಿರುವ ಸುಸಂದರ್ಭದಲ್ಲಿ ಎಲ್ಲಾ ಶಿಕ್ಣಕರುಗಳಿಗೆ ಸಾಷ್ಟಾಂಗ ನಮಸ್ಕಾರಗಳು.

ಮಧುಗಿರಿ ತಾಲೂಕಿನಲ್ಲಿ ಜೂನ್ 2023 ರ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಕಿರು ಪರಿಚಯ.


1.ಶ್ರೀ ಲಕ್ಷ್ಮಿನರಸಿಂಹಯ್ಯ.
ಬಡ್ರಿ ಮುಖ್ಯ ಶಿಕ್ಷಕರು 
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾರ್ಪೆನಹಳ್ಳಿ.

ಮಧುಗಿರಿ ತಾಲೂಕಿನ ದೊಡ್ಡೇರಿ ಹೊಬಳಿಯ ಜಕ್ಕೇನಹಳ್ಳಿ ಗ್ರಾಮದ  ನರಸಿಂಹಣ್ಣ ಮತ್ತು ಸಾಕಮ್ಮ ದಂಪತಿಯ ಮಗನಾಗಿ ದಿನಾಂಕ: 01.07.1963 ರಲ್ಲಿ ಜನಿಸಿದರು.ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದ ಇವರು ಪ್ರೌಢ ಶಿಕ್ಷಣವನ್ನು ಶ್ರೀ ಸಿದ್ಧಾರ್ಥ ವಸತಿ ಶಾಲೆ ಮಧುಗಿರಿಯಲ್ಲಿ ಪೂರೈಸಿದರು.ಪದವಿ ಪೂರ್ವ ಶಿಕ್ಷಣ ಹಾಗೂ ಶಿಕ್ಷಕ ತರಬೇತಿಯನ್ನು ಕೊರಟಗೆರೆಯಲ್ಲಿ ಪಡೆದರು. ಬಿ ಎ ಪದವಿಯನ್ನು ಟಿ ವಿ ವಿ ಕಾಲೇಜು ಮಧುಗಿರಿಯಲ್ಲಿ ಪಡೆದರು.    ದಿನಾಂಕ 17 ಆಗಸ್ಟ್ 1993ರಲ್ಲಿ ಸರ್ಕಾರಿ ಸೇವೆಗೆ ಸೇರಿದ ಸೇರಿದ ಇವರು ಸ.ಕಿ ಪ್ರಾ ಶಾಲೆ ಗೆಡ್ಡೆತಿಮ್ಮನಹಳ್ಳಿ ಸ.ಕಿ ಪ್ರಾ ಶಾಲೆ ಗಳಲ್ಲಿ ಸೇವೆ ಸಲ್ಲಿಸಿ,ಪ್ರಸುತ್ತ ಶಾಲೆಗೆ 14.05.2022 ರಲ್ಲಿ  ಮುಖ್ಯ ಶಿಕ್ಷಕರಾಗಿ ಬಡ್ತಿ ಪಡೆದ ಪಡೆಯುತ್ತಾರೆ.
ಇವರ ಸೇವಾ ವಧಿಯಲ್ಲಿ ನೆಟ್ ಬಾಲ್ ಕ್ರೀಡಾಕೂಟದಲ್ಲಿ ರಾಜ್ಯಮಟ್ಟಕ್ಕೆ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ


2. ಶ್ರೀ ರಾಮಾಂಜನೇಯ ಹೆಚ್.
ಬಡ್ತಿ ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಗತ್ತೂರು.

ಮಧುಗಿರಿ ತಾಲೂಕಿನ ಕೊಡಿಗೆನಹಳ್ಳಿ ಹೋಬಳಿಯ ಗುಟ್ಟೇ ಗ್ರಾಮದಲ್ಲಿ ಹನುಮಂತಪ್ಪ ಆರ್ ಮತ್ತು ಗಂಗಮ್ಮ ದಂಪತಿಗಳ ಮಗನಾಗಿ ದಿನಾಂಕ 18 ಜೂನ್ 1963 ರಲ್ಲಿ ಜನಿಸಿದರು ಪ್ರಾಥಮಿಕ ಶಿಕ್ಷಣವನ್ನ ಗುಟ್ಟೇ ಗ್ರಾಮದಲ್ಲಿ ಪಡೆದು ಪ್ರೌಢ ಶಿಕ್ಷಣವನ್ನು ಸರ್ವೋದಯ ಪ್ರೌಢಶಾಲೆಯಲ್ಲಿ ಪಡೆದವರು ಪದವಿ ಪೂರ್ವ ಶಿಕ್ಷಣವನ್ನ ಕೊರಟಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪಡೆಯುತ್ತಾರೆ, ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದ ಶಾಲೆಯಲ್ಲಿಯೇ ಶಿಕ್ಷಕ ವೃತ್ತಿಯನ್ನು ಖಾಸಗಿಯಾಗಿ ಪ್ರಾರಂಭಿಸಿದ ಇವರು ಸರ್ಕಾರಿ ಸೇವೆಗೆ ದಿನಾಂಕ 5 ಜುಲೈ 1994 ರಲ್ಲಿ ಸರ್ಕಾರಿ ಸೇವೆಗೆ ಶಿರಾ ತಾಲೂಕಿನ ಶಾಸನಮರು ಶಾಲೆಗೆ ಶಿಕ್ಷಕರಾಗಿ ವೃತ್ತಿಯನ್ನು ಪ್ರಾರಂಭಿಸುತ್ತಾರೆ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶ್ಯಾನಗಾನಹಳ್ಳಿ, ತಿಂಗಳೂರು, ರೆಡ್ಡಿಹಳ್ಳಿ ಜವರ ನಾಯಕನ ಪಾಳ್ಯ,ತಾಯಿಗೊಂಡನ ಹಳ್ಳಿ ಶಾಲೆಗಳಲ್ಲಿ ಸಹ ಶಿಕ್ಷಕನಾಗಿ ಸೇವೆ ಸಲ್ಲಿಸಿದ ಇವರು ದಿನಾಂಕ:05.06. 2022 ರಲ್ಲಿ ಪ್ರಸ್ತುತ ಶಾಲೆಯಾದ ಕಡಗತ್ತೂರು ಶಾಲೆಗೆ ಮುಖ್ಯ ಶಿಕ್ಷಕರಾಗಿ ಬಡ್ತಿ ಹೊಂದಿ ಸೇವೆ ಸಲ್ಲಿಸಿದರು.


3. ಶ್ರೀ ರಂಗಧಾಮಯ್ಯ
ಬಡ್ತಿ ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಠಲಾಪುರ.

ಮಧುಗಿರಿ ತಾಲೂಕಿನ ನೇರಳೆ ಕೆರೆ ಗ್ರಾಮದ ನಂಜಪ್ಪ ಮತ್ತು ಚೆನ್ನಮ್ಮ ದಂಪತಿಗಳ ಮಗನಾಗಿ ದಿನಾಂಕ 5 ಜೂನ್ 1943ರಲ್ಲಿ ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ನೇರಳೆಕೆರೆ ಗ್ರಾಮದಲ್ಲಿ ಪಡೆದು,ಪದವಿ ಪೂರ್ವ ಶಿಕ್ಷಣವನ್ನ ಮತ್ತು ಶಿಕ್ಷಕ ತರಬೇತಿ ಶಿಕ್ಷಣವನ್ನ ಮಿಡಿಗೇಶಿ ಕಾಲೇಜಿನಲ್ಲಿ ಪಡೆದ ಇವರು ಬಿಎ ಪದವಿಯನ್ನು ತುಮಕೂರು ಕಾಲೇಜಿನಲ್ಲಿ ಪೂರೈಸಿದರು. ಪಾವಗಡ ತಾಲೂಕಿನಲ್ಲಿ ದಿನಾಂಕ 28 ಜೂನ್ 1994 ರಲ್ಲಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದ ಇವರು ಸುಮಾರು ವರ್ಷಗಳ ಕಾಲ ಸೇವೆ ಸಲ್ಲಿಸಿ ಜವರನಾಯಕನ ಪಾಳ್ಯ ಇಲ್ಲಿಗೆ 2003ರಲ್ಲಿ ವರ್ಗಾವಣೆ ಪಡೆದರು ನಂತರ ವಿರೂಪಗೊಂಡನಹಳ್ಳಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಇವರು ದಿನಾಂಕ ಆರು ಮೇ 2022 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿಠಲಾಪುರ ಶಾಲೆಗೆ ಬಡ್ತಿ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿ ಇಂದಿನವರೆಗೂ ಸೇವೆ ಸಲ್ಲಿಸಿರುತ್ತಾರೆ.


4. ಶ್ರೀ ಗೋವಿಂದಯ್ಯ.
ಬಡ್ತಿ ಮುಖ್ಯ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಂದ್ರಾಳು.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಕ್ಕನಹಳ್ಳಿ ಗ್ರಾಮದ ಜೂಲಪ್ಪ ಮತ್ತು ಸಣ್ಣಮ್ಮ ದಂಪತಿಗಳ ಮಗನಾಗಿ ದಿನಾಂಕ:-01 ಜುಲೈ 1963 ರಲ್ಲಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿಯೇ ಪೂರೈಸಿದರು ಪ್ರೌಢಶಿಕ್ಷಣವನ್ನು ಕೊರಟಗೆರೆ ಮತ್ತು ಮಧುಗಿರಿಯಲ್ಲಿ ಪಡೆದ ಇವರು ಪದವಿ ಪೂರ್ವ ಶಿಕ್ಷಣ ಹಾಗೂ  ಶಿಕ್ಷಕರ ತರಬೇತಿ ಶಿಕ್ಷಣವನ್ನು ಕೊರಟಗೆರೆ ಕಾಲೇಜಿನಲ್ಲಿ ಪಡೆದುಕೊಂಡರು, ಸರ್ಕಾರಿ ಸೇವೆಗೆ ದಿನಾಂಕ:19.02 1985ರಲ್ಲಿ ಕರ್ತವ್ಯಕ್ಕೆ ಸಿರಾ ತಾಲೂಕಿನ ಹಾಲೆನಹಳ್ಳಿಯಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಂತರ ಮಧುಗಿರಿ ತಾಲೂಕಿನ ಬಿಜವರ, ಸೋಗೆನಹಳ್ಳಿ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಾರೆ. 2006ನೇ ಇಸವಿಯಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅವರಗಲ್ಲು ಶಾಲೆಗೆ ಬಡ್ತಿ ಮುಖ್ಯ ಶಿಕ್ಷಕರಾಗಿ ಕರ್ತವ್ಯಕ್ಕೆ ಹಾಜರಾಗಿ ನಂತರ ಹಂದ್ರಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಇವರು ಉನ್ನತ್ತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಂಡವಾಡಿ ಶಾಲೆಯಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ


5. ಶ್ರೀ ಜಯಪ್ರಕಾಶ್.
ಸಹ ಶಿಕ್ಷಕರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆಂಪಚನ್ನೇನಹಳ್ಳಿ.

ಮಧುಗಿರಿ ತಾಲೂಕಿನ ಹೊಸಕೆರೆ ಗ್ರಾಮದ ಗ್ರಾಮದಲ್ಲಿ ರಂಗಧಾಮಪ್ಪನವರ ಪುತ್ರನಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಪಾವಗಡ ತಾಲೂಕಿನ ಕನ್ನಮೇಡಿ ಗ್ರಾಮದಲ್ಲಿ ಪಡೆದರು, ಪ್ರೌಢಶಿಕ್ಷಣವನ್ನು ಸಿದ್ದೇಶ್ವರ ಸ್ವಾಮಿ ಪ್ರೌಢಶಾಲೆ ಚನ್ನಕೇಶಪುರ ಈ ಶಾಲೆಯಲ್ಲಿ ಪಡೆದಿರುತ್ತಾರೆ, ಪದವಿ ಪೂರ್ವ ಶಿಕ್ಷಣ ಮತ್ತು ಶಿಕ್ಷಕರ ತರಬೇತಿಯನ್ನು ಕೊರಟಗೆರೆಯಲ್ಲಿ ಪಡೆದ ಇವರು ಸರ್ಕಾರಿ ಸೇವೆಗೆ ಪಾವಗಡ ತಾಲೂಕಿನ ಬಿ.ಕೆ.ಹಳ್ಳಿ ಗ್ರಾಮದಲ್ಲಿ ದಿನಾಂಕ 31 ಡಿಸೆಂಬರ್ 1998ರಲ್ಲಿ ಸರಕಾರಿ ಸೇವೆಗೆ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡುತ್ತಾರೆ, ನಂತರ ಮಧುಗಿರಿ ತಾಲೂಕಿನ ಕಸಬಾ ಹೋಬಳಿಯ ಪೆಮ್ಮಯ್ಯನ ಪಾಳ್ಯ ಗ್ರಾಮದ ಶಾಲೆಗೆ 2005ರಲ್ಲಿ ವರ್ಗಾವಣೆಗೊಂಡರು ನಂತರ ಗಂಪಲಹಳ್ಳಿ  ಶಾಲೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಕೆಂಪಚನ್ನೇನಹಳ್ಳಿ ಗ್ರಾಮದಲ್ಲಿ 17 ವರ್ಷಗಳ ನಿರಂತರ ಸೇವೆಯನ್ನು ಸಲ್ಲಿಸಿರುತ್ತಾರೆ


6.ಶ್ರೀಮತಿ ಸುಶೀಲಮ್ಮ.
ಸಹ ಶಿಕ್ಷಕರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಂಗಾಪುರ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು  ಸಮೀಪದ ಕಾರೇನಹಳ್ಳಿಯ ನಿಂಗಪ್ಪ ಮತ್ತು ಲಕ್ಷ್ಮಮ್ಮ ದಂಪತಿಗಳ ಮಗಳಾಗಿ ದಿನಾಂಕ:- 01-07-1963 ರಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದ ಇವರು ಪ್ರೌಢಶಾಲಾ ಶಿಕ್ಷಣವನ್ನು ತ್ಯಾಮಗೊಂಡ್ಲು ಶಾಲೆಯಲ್ಲಿ ಪಡೆದರು. ಶಿಕ್ಷಕರ ತರಬೇತಿಯನ್ನು ಬೆಂಗಳೂರಿನ ಈಸ್ಟ್ ವೆಸ್ಟ್ ಕಾಲೇಜು ಸುಬ್ರಮಣ್ಯ ನಗರದ ಕಾಲೇಜಿನಲ್ಲಿ ಪಡೆದ ಇವರು ದಿನಾಂಕ:19-08-1993 ರಲ್ಲಿ ಬೆಂಗಳೂರು ದಕ್ಷಿಣ ವಲಯ-01 ರ ವಾಡಹಳ್ಳಿ ಶಾಲೆಯಲ್ಲಿ ವೃತ್ತಿ ಪ್ರಾರಂಭಿಸಿದರು. ಹತ್ತು ವರ್ಷಗಳ ಸೇವೆ ಸಲ್ಲಿಸಿ ನಂತರ 2004 ರಲ್ಲಿ ಪುಲಮಘಟ್ಟ ಶಾಲೆಗೆ ವರ್ಗಾವಣೆಗೊಂಡರು.
ಒಂಬತ್ತು ವರ್ಷದ ನಂತರ 2013 ಕ್ಕೆ ಪ್ರಸುತ್ತ ಶಾಲೆಗೆ ವರ್ಗಾವಣೆ ಹೊಂದಿದರು. ಇಂದು ನಿವೃತ್ತಿ ಹೊಂದುತ್ತಿರುವ ಗೌರವಾನ್ವಿತ ಶಿಕ್ಷಕರುಗಳಿಗೆ ನೂರೊಂದು ನಮನಗಳು.





ಗೃಹ ಜ್ಯೋತಿ ಯೋಜನೆಗೆ ನೋಂದಣಿ

ಗೃಹ ಜ್ಯೋತಿ ಯೋಜನೆಗೆ ನೋಂದಣಿ ಪ್ರಕ್ರಿಯೆಯ ಸಂಪೂರ್ಣ ಮಾಹಿತಿ.














ಯೋಗ ದಿನಾಚರಣೆ-2023



              9 ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ವರದಿ.

ಫೋಟೊ ವರದಿಗಾಗಿ ಕ್ಲಿಕ್ ಮಾಡಿ.


ಜವಾಹರ ನವೋದಯ ಶಾಲೆಯ ಫಲಿತಾಂಶ


 










                                                           ಜವಾಹರ ನವೋದಯ ಶಾಲೆಯ ಫಲಿತಾಂಶಕ್ಕಾಗಿ ಕ್ಲಿಕ್ ಮಾಡಿ

RBI QUIZE COMPETITION


RBI ಹಣಕಾಸು ಸಾಕ್ಷರತೆ ರಸಪ್ರಶ್ನೆ ಸ್ಪರ್ಧೆ - RBI Financial Literacy Quiz Competition.


ರಸಪ್ರಶ್ನೆ ಸ್ಪರ್ಧೆ:

ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಶಾಲಾ ಮಕ್ಕಳಲ್ಲಿ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಪ್ರಾರಂಭಿಸಿದ್ದು,, ಪ್ರಸ್ತುತ ಸಾಲಿನಲ್ಲಿ ಶಾಲಾ ಮಕ್ಕಳಲ್ಲಿ ಆರ್ಥಿಕ ಶಿಕ್ಷಣದ ಪರಿಕಲ್ಪನೆಗಳ ಕುರಿತು ಹೆಚ್ಚಿನ ಅರಿವು ಮೂಡಿಸುವ ದೃಷ್ಟಿಯಿಂದ ರಾಜ್ಯದ ಎಲ್ಲಾ ಸರ್ಕಾರಿ ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Quiz Competition) ಸ್ಪರ್ಧೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹವಾಮಾನ ವೈಪರೀತ್ಯ, ಬ್ಯಾಂಕಿನ ವ್ಯವಸ್ಥೆ ಹಾಗೂ ದೇಶದ ಅರ್ಥವ್ಯವಸ್ಥೆಯ ಬಗ್ಗೆ ಹೆಚ್ಚಿನ ಜ್ಞಾನ ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮವು ಪೂರಕವಾಗಿದೆ.
ಉದ್ದೇಶಗಳು:
• ವಿದ್ಯಾರ್ಥಿಗಳಿಗೆ ಆರ್ಥಿಕ ಸಾಕ್ಷರತೆ ಯ ಬಗ್ಗೆ ಅರಿವು ಮೂಡಿಸುವುದು. .
• ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು.
• ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದು.
• ವಿದ್ಯಾರ್ಥಿಗಳಲ್ಲಿ ಸಹಕಾರ ಮನೋಭಾವನೆ, ಗುಂಪು ಚರ್ಚೆ, ತೀಕ್ಷ್ಣ ನಿರ್ಧಾರ ತೆಗೆದು ಕೊಳ್ಳುವ, ಸ್ಪರ್ಧಾ ಪ್ರವೃತ್ತಿಯನ್ನು ಬೆಳೆಸುವುದು.
• ವಿದ್ಯಾರ್ಥಿಗಳಲ್ಲಿ ಭಾರತ ದೇಶದ ಅರ್ಥ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸುವುದು.

ಅರ್ಹತೆ :

ಸರ್ಕಾರಿ, ಕಾರ್ಪೊರೇಷನ್, ಸಮಾಜ ಕಲ್ಯಾಣ ಇಲಾಖೆ ಹಾಗೂ ಬುಡಕಟ್ಟು ಕಲ್ಯಾಣ ಇಲಾಖೆ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ 8 ರಿಂದ 10ನೇ ತರಗತಿಯ ವಿದ್ಯಾರ್ಥಿಗಳು ಭಾಗವಹಿಸಬಹುದು.
ಶಾಲಾ ಹಂತದ ನೊಂದಣಿಗಾಗಿ  & ಸಂಪೂರ್ಣ ಮಾಹಿತಿಗಾಗಿ ಕೆಳಗಿನ ಲಿಂಕ್ ಒತ್ತಿ.

7 th Pay Calculator.