ಮಧುಗಿರಿ ತಾಲೂಕಿನಲ್ಲಿ ಏಪ್ರಿಲ್-2023 ರ ತಿಂಗಳಲ್ಲಿ ನಿವೃತ್ತಿಯಾಗಲಿರುವ ಶಿಕ್ಷಕರು.

ಸುದೀರ್ಘ ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಮಧುಗಿರಿ ತಾಲೂಕಿನ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…..


ಶ್ರೀಮತಿ ಲಕ್ಷ್ಮೀದೇವಮ್ಮ.ಬಿ.
ಸಹ ಶಿಕ್ಷಕರು,
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುದ್ದಯ್ಯನ ಪಾಳ್ಯ.
ಗಂಜಲಗುಂಟೆ ಕ್ಲಸ್ಟರ್, ಮಧುಗಿರಿ ತಾಲೂಕು||

ದಿನಾಂಕ 01-05-1963 ರಂದು ತುಮಕೂರು ತಾಲೂಕಿನ ಗುಂಡಿನಪಾಳ್ಯ ಗ್ರಾಮದ ಭೋಗನರಸಿಂಹಯ್ಯ ಎ ಹಾಗೂ ಶ್ರೀಮತಿ ಗಂಗಮ್ಮ ದಂಪತಿಗಳ ಐದನೇಯ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನುಸರ್ಕಾರಿ ಪ್ರಾಥಮಿಕ ಶಾಲೆ ಹಿರೇದೊಡ್ಡವಾಡಿಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಉರ್ಡಿಗೆರೆಯಲ್ಲಿ ಪಡೆದು, ಬೆಂಗಳೂರಿನ ಮಲ್ಲೇಶ್ವರಂನ MY INSTITUTE ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು, ದಿನಾಂಕ:08-06-1986 ರಲ್ಲಿ ಕೆ.ಜಿ.ಬಸಣ್ಣ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ದಿನಾಂಕ : 11-08-1993 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಚೇನಹಳ್ಳಿಯಲ್ಲಿ  ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 10 ವರ್ಷಗಳ ಸೇವೆ ಸಲ್ಲಿಸಿ 2003 ರಲ್ಲಿ  ತುಂಗೋಟಿ ಶಾಲೆಗೆ ವರ್ಗಾವಣೆಗೊಂಡು 08 ವರ್ಷಗಳ ಕಾಲ ಸೇವೆ ಸಲ್ಲಿಸಿದ  ಇವರು  ಪ್ರಸ್ತುತ ಶಾಲೆಯಲ್ಲಿ 2011 ರಿಂದ ಇಲ್ಲಿನ ತನಕ ಸೇವೆ  ಸಲ್ಲಿಸಿದರು, ಇವರು ಸುಮಾರು 30 ವರ್ಷಗಳ ಕಾಲ  ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.


               
                                 ಶ್ರೀಮತಿ ಶಾಂತಮ್ಮ ಬಿ.ಜಿ.
                                      ಸಹ ಶಿಕ್ಷಕರು.
                            ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಚೇನಹಳ್ಳಿ,
                                   ಸಿದ್ದಾಪುರ ಕ್ಲಸ್ಟರ್, ಮಧುಗಿರಿ ತಾ||

ದಿನಾಂಕ 18-04-1963 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ   ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಚಳ್ಳಕೆರೆಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಪಡೆದು, ಚಳ್ಳಕೆರೆಯ ಹರಳಯ್ಯ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡರು, ಮಧಿಗಿರಿಯ ಶಂಕರ್ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ  ಇವರು  ದಿನಾಂಕ : 17-07-1996 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನಕವಜ್ರ ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿ, ನಂತರ ಇವರು 2012 ರಲ್ಲಿ   ಪ್ರಸ್ತುತ ಶಾಲೆಗೆ ವರ್ಗಾವಣೆಗೊಂಡು ಇಲ್ಲಿನ ತನಕ ಸೇವೆ  ಸಲ್ಲಿಸಿದರು, ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಕಲೆ,ಚಿತ್ರಕಲೆ,ಸಂಗೀತದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ, 2022 ನೇ ಸಾಲಿನ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಗಳಿಗೆ ಭಾಜನರಾದ ಇವರು ಸುಮಾರು 27 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.


ಶ್ರೀ ಮತಿ ಮುಬೀನ್ ತಾಜ್.
ಸಹ ಶಿಕ್ಷಕಿ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಶಿರಾ ಗೇಟ್ ಮಧುಗಿರಿ.
ಉರ್ದು ಕ್ಲಸ್ಟರ್ ಮಧುಗಿರಿ ತಾ||


ದಿನಾಂಕ 22-04-1963 ರಂದು ತುಮಕೂರು ಜಿಲ್ಲೆಯ ಮಧುಗಿರಿಯ ಪಟ್ಟಣದ ಶ್ರೀ ಅಬ್ದುಲ್  ಮುನಾಫ್ ಸಾಬ್  ಹಾಗೂ ಶ್ರೀಮತಿ ಸಾಬ್ರುನ್ ಉನ್ನೀಸಾ ದಂತಿಗಳ ಮಗಳಾಗಿ ಜನಿಸಿದ ಇವರು  ಪ್ರಾಥಮಿಕ ಶಿಕ್ಷಣವನ್ನುಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು MGM ಪ್ರೌಢಶಾಲೆಯಲ್ಲಿ & ಸರ್ಕಾರಿ ಪದವಿ ಪೂರ್ವ ಕಾಲೇಜು  ಮಧುಗಿರಿಯಲ್ಲಿ PUC ಶಿಕ್ಷಣ ಪಡೆದು, ತುಮಕೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ  ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು, ಶ್ರೀ ನಾಸಿರುದ್ದಿನ್ ಜಿ.ಎಮ್ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ದಿನಾಂಕ : 23-12-1998 ರಲ್ಲಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹೊಸಕೆರೆ  ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ಜುಲೈ 2013 ರಲ್ಲಿ  ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಶಿರಾ ಗೇಟ್ ಮಧುಗಿರಿ ಶಾಲೆಗೆ ವರ್ಗಾವಣೆಗೊಂಡು ಇವರು  ಪ್ರಸ್ತುತ ಶಾಲೆಯಲ್ಲಿ 2013 ರಿಂದ ಇಲ್ಲಿನ ತನಕ ಸೇವೆ  ಸಲ್ಲಿಸಿದರು, ಇವರು ಸುಮಾರು 25 ವರ್ಷಗಳ ಕಾಲ  ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.






7 th Pay Calculator.