ಮಧುಗಿರಿ ತಾಲೂಕಿನಲ್ಲಿ ಏಪ್ರಿಲ್-2023 ರ ತಿಂಗಳಲ್ಲಿ ನಿವೃತ್ತಿಯಾಗಲಿರುವ ಶಿಕ್ಷಕರು.

ಸುದೀರ್ಘ ವರ್ಷಗಳ ಕಾಲ ಸಾರ್ಥಕ ಸೇವೆಗೈದು ಅನೇಕ ವಿದ್ಯಾರ್ಥಿಗಳ ಬಾಳಿನಲ್ಲಿ ಜ್ಞಾನ ದೀಪವ ಬೆಳಗಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿರುವ ಮಧುಗಿರಿ ತಾಲೂಕಿನ ಶಿಕ್ಷಕರ ಪರಿಚಯವನ್ನು ತಮ್ಮ ಮುಂದಿಡಲು ಹೆಮ್ಮೆ ಪಡುತ್ತಿದ್ದೇವೆ…..


ಶ್ರೀಮತಿ ಲಕ್ಷ್ಮೀದೇವಮ್ಮ.ಬಿ.
ಸಹ ಶಿಕ್ಷಕರು,
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುದ್ದಯ್ಯನ ಪಾಳ್ಯ.
ಗಂಜಲಗುಂಟೆ ಕ್ಲಸ್ಟರ್, ಮಧುಗಿರಿ ತಾಲೂಕು||

ದಿನಾಂಕ 01-05-1963 ರಂದು ತುಮಕೂರು ತಾಲೂಕಿನ ಗುಂಡಿನಪಾಳ್ಯ ಗ್ರಾಮದ ಭೋಗನರಸಿಂಹಯ್ಯ ಎ ಹಾಗೂ ಶ್ರೀಮತಿ ಗಂಗಮ್ಮ ದಂಪತಿಗಳ ಐದನೇಯ ಮಗಳಾಗಿ ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನುಸರ್ಕಾರಿ ಪ್ರಾಥಮಿಕ ಶಾಲೆ ಹಿರೇದೊಡ್ಡವಾಡಿಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು ಸರ್ಕಾರಿ ಸಂಯುಕ್ತ ಪ್ರೌಢಶಾಲೆ ಉರ್ಡಿಗೆರೆಯಲ್ಲಿ ಪಡೆದು, ಬೆಂಗಳೂರಿನ ಮಲ್ಲೇಶ್ವರಂನ MY INSTITUTE ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು, ದಿನಾಂಕ:08-06-1986 ರಲ್ಲಿ ಕೆ.ಜಿ.ಬಸಣ್ಣ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು, ದಿನಾಂಕ : 11-08-1993 ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಚೇನಹಳ್ಳಿಯಲ್ಲಿ  ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 10 ವರ್ಷಗಳ ಸೇವೆ ಸಲ್ಲಿಸಿ 2003 ರಲ್ಲಿ  ತುಂಗೋಟಿ ಶಾಲೆಗೆ ವರ್ಗಾವಣೆಗೊಂಡು 08 ವರ್ಷಗಳ ಕಾಲ ಸೇವೆ ಸಲ್ಲಿಸಿದ  ಇವರು  ಪ್ರಸ್ತುತ ಶಾಲೆಯಲ್ಲಿ 2011 ರಿಂದ ಇಲ್ಲಿನ ತನಕ ಸೇವೆ  ಸಲ್ಲಿಸಿದರು, ಇವರು ಸುಮಾರು 30 ವರ್ಷಗಳ ಕಾಲ  ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.


               
                                 ಶ್ರೀಮತಿ ಶಾಂತಮ್ಮ ಬಿ.ಜಿ.
                                      ಸಹ ಶಿಕ್ಷಕರು.
                            ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆಚೇನಹಳ್ಳಿ,
                                   ಸಿದ್ದಾಪುರ ಕ್ಲಸ್ಟರ್, ಮಧುಗಿರಿ ತಾ||

ದಿನಾಂಕ 18-04-1963 ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ   ಜನಿಸಿದ ಇವರು ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಪ್ರಾಥಮಿಕ ಶಾಲೆ ಚಳ್ಳಕೆರೆಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ಪಡೆದು, ಚಳ್ಳಕೆರೆಯ ಹರಳಯ್ಯ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಶಿಕ್ಷಕರ ತರಬೇತಿ ಪಡೆದುಕೊಂಡರು, ಮಧಿಗಿರಿಯ ಶಂಕರ್ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ  ಇವರು  ದಿನಾಂಕ : 17-07-1996 ರಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಿನಕವಜ್ರ ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 16 ವರ್ಷಗಳ ಸೇವೆ ಸಲ್ಲಿಸಿ, ನಂತರ ಇವರು 2012 ರಲ್ಲಿ   ಪ್ರಸ್ತುತ ಶಾಲೆಗೆ ವರ್ಗಾವಣೆಗೊಂಡು ಇಲ್ಲಿನ ತನಕ ಸೇವೆ  ಸಲ್ಲಿಸಿದರು, ವೃತ್ತಿಯಲ್ಲಿ ಶಿಕ್ಷಕರಾಗಿ ಪ್ರವೃತ್ತಿಯಲ್ಲಿ ಕಲೆ,ಚಿತ್ರಕಲೆ,ಸಂಗೀತದ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ, 2022 ನೇ ಸಾಲಿನ ತಾಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಪ್ರಶಸ್ತಿಗಳಿಗೆ ಭಾಜನರಾದ ಇವರು ಸುಮಾರು 27 ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.


ಶ್ರೀ ಮತಿ ಮುಬೀನ್ ತಾಜ್.
ಸಹ ಶಿಕ್ಷಕಿ.
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಶಿರಾ ಗೇಟ್ ಮಧುಗಿರಿ.
ಉರ್ದು ಕ್ಲಸ್ಟರ್ ಮಧುಗಿರಿ ತಾ||


ದಿನಾಂಕ 22-04-1963 ರಂದು ತುಮಕೂರು ಜಿಲ್ಲೆಯ ಮಧುಗಿರಿಯ ಪಟ್ಟಣದ ಶ್ರೀ ಅಬ್ದುಲ್  ಮುನಾಫ್ ಸಾಬ್  ಹಾಗೂ ಶ್ರೀಮತಿ ಸಾಬ್ರುನ್ ಉನ್ನೀಸಾ ದಂತಿಗಳ ಮಗಳಾಗಿ ಜನಿಸಿದ ಇವರು  ಪ್ರಾಥಮಿಕ ಶಿಕ್ಷಣವನ್ನುಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕಿಯರ ಶಾಲೆ ಯಲ್ಲಿ ಪೂರೈಸಿ,ಪ್ರೌಢ ಶಾಲಾ ಶಿಕ್ಷಣವನ್ನು MGM ಪ್ರೌಢಶಾಲೆಯಲ್ಲಿ & ಸರ್ಕಾರಿ ಪದವಿ ಪೂರ್ವ ಕಾಲೇಜು  ಮಧುಗಿರಿಯಲ್ಲಿ PUC ಶಿಕ್ಷಣ ಪಡೆದು, ತುಮಕೂರಿನ ಸರ್ಕಾರಿ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ  ಶಿಕ್ಷಕರ ತರಬೇತಿಯನ್ನು ಪಡೆದುಕೊಂಡರು, ಶ್ರೀ ನಾಸಿರುದ್ದಿನ್ ಜಿ.ಎಮ್ ರವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟು, ದಿನಾಂಕ : 23-12-1998 ರಲ್ಲಿ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ ಹೊಸಕೆರೆ  ಮಧುಗಿರಿ ತಾಲೂಕಿನಲ್ಲಿ ವೃತ್ತಿ ಪ್ರಾರಂಭಿಸಿದ ಇವರು ಈ ಶಾಲೆಯಲ್ಲಿ 15 ವರ್ಷಗಳ ಸೇವೆ ಸಲ್ಲಿಸಿ ಜುಲೈ 2013 ರಲ್ಲಿ  ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಶಿರಾ ಗೇಟ್ ಮಧುಗಿರಿ ಶಾಲೆಗೆ ವರ್ಗಾವಣೆಗೊಂಡು ಇವರು  ಪ್ರಸ್ತುತ ಶಾಲೆಯಲ್ಲಿ 2013 ರಿಂದ ಇಲ್ಲಿನ ತನಕ ಸೇವೆ  ಸಲ್ಲಿಸಿದರು, ಇವರು ಸುಮಾರು 25 ವರ್ಷಗಳ ಕಾಲ  ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿ ಈ ತಿಂಗಳು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ.ಇವರಿಗೆ ನಿವೃತ್ತ ಜೀವನದ ಶುಭಾಶಯಗಳು.












ಕರ್ನಾಟಕ  ರಾಜ್ಯದ 2022-23 ನೇ ಸಾಲಿನ ದ್ವಿತೀಯ ಪಿ ಯು ಸಿ ಪರೀಕ್ಷೆಯ ಫಲಿತಾಂಶ ದಿನಾಂಕ:-21-04-2023 ರ ಶುಕ್ರವಾರ ಬೆಳಿಗ್ಗೆ 11-00 ಪ್ರಕಟವಾಗಲಿದೆ...


ಫಲಿತಾಂಶ ನೋಡಲ್ ಕ್ಲಿಕ್ ಮಾಡಿ.

 





How to check SSP

 Scholarship Status 2023 | SSP Scholarship                                      Karnataka 2022-23

ನಿಮಗೆ ಬಂದಿಲ್ಲ ಅಂದ್ರೆ ಏನು ಮಾಡಬೇಕು:  ನಿಮ್ಮ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಆಗಿದೆಯಾ? ಚೆಕ್ ಮಾಡಿ:  

SSP Scholarship Status 2023SSP Scholarship Amount Sanction Updates 2022–2023: ನಿಮ್ಮ ಖಾತೆಗೆ ವಿದ್ಯಾರ್ಥಿವೇತನ ಬಿಡುಗಡೆ ಗೊಂಡಿದ್ದು, ನಿಮ್ಮ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಆಗಿದೆ or ಇಲ್ಲವೋ ಎಂಬುದನ್ನು check ಮಾಡಿ. ನಿಮಗೆ ಹಣ ಬಂದಿಲ್ವಾ? ಹಾಗಾದರೆ ಈ ರೀತಿ ಚೆಕ್ ಮಾಡಿಕೊಳ್ಳಿ.   ಈ ಲೇಖನದಲ್ಲಿ, ಎಸ್‌ಎಸ್‌ಪಿ (Karnataka SSP Scholarship Status) ವಿದ್ಯಾರ್ಥಿವೇತನ ಸ್ಥಿತಿಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ,

Karnataka SSP Scholarship Amount Status 2023: ಅಭ್ಯರ್ಥಿಗಳು ಎಸ್‌ಎಸ್‌ಪಿ Scholarship Status 2023, Maintenance Amount, and Day Scholarship Amount Credited To A/C (ಬ್ಯಾಂಕ್ ಖಾತೆ) ಗೆ ಕ್ರೆಡಿಟ್ ಮಾಡಲಾದ ವಿದ್ಯಾರ್ಥಿವೇತನದ ಮೊತ್ತವನ್ನು ಹೇಗೆ ಪರಿಶೀಲಿಸುವುದು ಎಂಬುದನ್ನು ಪರಿಶೀಲಿಸುವ ವಿಧಾನವನ್ನು ಓದಬಹುದು ಮತ್ತು ಸಂಪೂರ್ಣ ವಿವರಗಳೊಂದಿಗೆ ಕೆಳಗಿನ ಈ ಪೋಸ್ಟ್‌ನಲ್ಲಿ ಎಸ್‌ಎಸ್‌ಪಿ ಕರ್ನಾಟಕ ಸ್ಕಾಲರ್‌ಶಿಪ್ ಮೊತ್ತ 2023 ರ ಸ್ಥಿತಿಯನ್ನು ಪರಿಶೀಲಿಸಿ

SSP Scholarship ಚೆಕ್ ಮಾಡುವ ವಿಧಾನ: ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಾಗೂ ವಿದ್ಯಾರ್ಥಿಯ SATS ಗುರುತಿನ ಸಂಖ್ಯೆಯನ್ನು ನಮೂದಿಸಿ,ಆಯವ್ಯಯ ವರ್ಷ Select ಮಾಡಿ, ನಂತರ Submit ಮಾಡಿ.   ನಿಮ್ಮ ಖಾತೆಗೆ ವಿದ್ಯಾರ್ಥಿ ವೇತನ ಜಮೆ ಆಗಿದೆ or ಇಲ್ಲವೋ ಎಂಬುದನ್ನು Check ಮಾಡಿ. 






check the Karnataka SSP scholarship amount status.


Notes: ಇನ್ನು ಯಾರಿಗೆ SSP Scholarship amount ಬಂದಿಲ್ಲಾ ಅಂದ್ರೆ ಏನು ಮಾಡಬೇಕು:  ಎಪ್ರಿಲ್/ May ತಿಂಗಳ ವರೆಗೆ wait ಮಾಡಿ.






 







ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು.





ನವೋದಯ ವಿದ್ಯಾಲಯ ಪರೀಕ್ಷೆಯ ಪ್ರವೇಶ Download ಮಾಡಿಕೊಳ್ಳಲು ಕ್ಲಿಕ್ ಮಾಡಿ.


ನವೋದಯ ವಿದ್ಯಾಲಯ ಪರೀಕ್ಷೆ-2004 ರ ಪ್ರಶ್ನೆ ಪತ್ರಿಕೆ

ನವೋದಯ ವಿದ್ಯಾಲಯ ಪರೀಕ್ಷೆ-2005 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ-2006 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ-2007 ರ ಪಶ್ನೆ ಪ್ರತಿಕೆ.

ನವೋದಯ ವಿದ್ಯಾಲಯ ಪರೀಕ್ಷೆ-2008 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ-2009 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ-2010 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2011 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2012 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2013 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2014 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2015 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2016 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2017 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2018 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2019 ರ ಪ್ರಶ್ನೆ ಪತ್ರಿಕೆ.

ನವೋದಯ ವಿದ್ಯಾಲಯ ಪರೀಕ್ಷೆ 2020 ರ ಪ್ರಶ್ನೆ ಪತ್ರಿಕೆ.


2023-24 ನೇ ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಮಾಹಿತಿ.
 

7 th Pay Calculator.