https://youtu.be/DygPJgUG1-g
Pages
- Home
- DEEKSHA LOGIN
- INSPIREAWARD
- GPF BALANCE SHEET
- U DISE PLUS
- KANNADA SAHITYA PARISHATH.
- VIDYA VAHINI
- SSP LOGIN
- SATS
- DSERT
- SCHOOL EDUCATION
- NSP PORTAL
- SATS MDM
- PLI SERVICES
- KGID LOGIN
- U DISE PLUS
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ.
- ಕನ್ನಡ ಸಾಹಿತ್ಯ ಪರಿಷತ್ತು
- EEDS LOGIN
- KTBS
- NAVODAYA VIDYALAYA SAMITHI
- K E A Result
- HRMS
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ.
ರಸ ಪ್ರಶ್ನೆ
ಪ್ರೌಢ ಹಾಗೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗಾಗಿ “ರಾಷ್ಟ್ರೀಯ ಆವಿಷ್ಕಾರ್ ಅಭಿಯಾನ ಕಾರ್ಯಕ್ರಮದಡಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (Qult Competition) ಸ್ಪರ್ಧೆಯನ್ನು ಆಯೋಜಿಸಲು ಅನುಮೋದನೆಯಾಗಿರುತ್ತದೆ. ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯನ್ನು ಆಯೋಜಿಸುವ ಮೂಲಕ ಅವರಲ್ಲಿ ಗಣಿತ, ವಿಜ್ಞಾನ, ತಂತ್ರಜ್ಞಾನ, ಸಾಮಾನ್ಯ ಜ್ಞಾನ, ಭಾಷೆ, ಭಾರತ ದೇಶದ ಪರಂಪರೆ ಹಾಗೂ ವಿವಿಧ ಇತರ ವಿಷಯಗಳಲ್ಲಿ ಅರಿವಿನ ಮಟ್ಟವನ್ನು ಹೆಚ್ಚಿಸಲು ಹಾಗೂ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಲು ಈ ಕಾರ್ಯಕ್ರಮವು ಪೂರಕವಾಗಿದೆ.
ಈ ರಸಪ್ರಶ್ನೆಯ ಉದ್ದೇಶಗಳು ಹೀಗಿವೆ :
ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳ ಬಗ್ಗೆ ತಿಳಿಯುವ ಕುತೂಹಲ ಹಾಗೂ ಸಾಮಾನ್ಯ ಜ್ಞಾನವನ್ನು ಬೆಳೆಸುವುದು.
ವಿದ್ಯಾರ್ಥಿಗಳಲ್ಲಿ ಚಿಂತಿಸುವ, ವಿಶ್ಲೇಷಿಸುವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವುದು. ಭಾರತವು ವಿವಿಧ ಕ್ಷೇತ್ರದಲ್ಲಿ ಸಾಧಿಸಿರುವ ಸಾಧನೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು.
ವಿದ್ಯಾರ್ಥಿಗಳನ್ನು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿ ಅವರಲ್ಲಿ ಸ್ಪರ್ಧಾ ಮನೋಭಾವನೆಯನ್ನು ಬೆಳೆಸುವುದು.
ಭಾರತದ ಶ್ರೀಮಂತ ಪರಂಪರೆಯನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿ, ಅವರಲ್ಲಿ ದೇಶದ ಬಗ್ಗೆ ಹೆಮ್ಮೆ ಹಾಗೂ ದೇಶಪ್ರೇಮ ಬೆಳೆಸುವುದು.
ರಾಷ್ಟ್ರೀಯ ಶಿಕ್ಷಣ ನೀತಿ 2020 ನ್ನು ಕಾರ್ಯಗತಗೊಳಿಸುವಲ್ಲಿ ಕರ್ನಾಟಕವು ಕಾರ್ಯ ಪುವೃತ್ತವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಸೂಚಕಗಳಲ್ಲಿ ಒಂದಾದ ಭಾರತ ಕೇಂದ್ರಿತ ಶಿಕ್ಷಣ ಹಾಗೂ ನಮ್ಮ ಶಾಲಾ ಮಕ್ಕಳಲ್ಲಿ ಭಾರತದ ದೇಶದ ಬಗ್ಗೆ ಹಮ್ಮ, ಸಂಸ್ಕೃತಿ ಪರಂಪರೆಯ ಕುರಿತು ಜಾಗೃತಿ ಮೂಡಿಸುವ ಪ್ರಾಮುಖ್ಯತೆಯನ್ನು ನಿರ್ಧಿಪ್ರವಾಗಿ “ಭಾರತದ ಜ್ಞಾನ” (Knowledge of INDIA ) ಎಂದು ಕರೆಯಲಾಗುತ್ತದೆ. ಭಾರತದ ಸ್ವಾತಂತ್ರದ 75 ವರ್ಷಗಳ ಸಂಭ್ರಮಾಚರಣೆಯ “ಆಜಾದಿ ಕಾ ಅಮೃತ್ ಮಹೋತ್ಸವ ” ಕಾರ್ಯಕ್ರಮದಡಿಯಲ್ಲಿ ಶಾಲೆ, ತಾಲೂಕು, ಜಿಲ್ಲೆ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಸ್ಪರ್ಧೆಯ ಹಂತಗಳು:
ಶಾಲೆ, ತಾಲ್ಲೂಕು, ಜಿಲ್ಲೆ ವಿಭಾಗ ಹಾಗೂ ರಾಜ್ಯ ಹಂತಗಳಲ್ಲಿ ಈ ಸ್ಪರ್ಧೆಯನ್ನು ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಓದುತ್ತಿರುವ 5 ರಿಂದ 10 ನೇ ತರಗತಿಗಳ ವಿದ್ಯಾರ್ಥಿಗಳಿಗೆ 2 ಹಂತಗಳಲ್ಲಿ ಆಯೋಜಿಸಲಾಗಿದೆ.
- ಕಿರಿಯರ ವಿಭಾಗ /ಜೂನಿಯರ್ ವಿಭಾಗ (5ರಿಂದ 7 ತರಗತಿಯ ವಿದ್ಯಾರ್ಥಿಗಳಿಗಾಗಿ)
- ಹಿರಿಯರ ವಿಭಾಗ /ಸೀನಿಯರ್ ವಿಭಾಗ (8ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ)
KSOU MYSORE
FIT INDIA ಶಾಲಾ ಸಪ್ತಾಹ ಕಾರ್ಯಕ್ರಮದ ನೊಂದಣಿ ಮತ್ತು ಆದೇಶ.
FIT INDIA ಶಾಲಾ ಸಪ್ತಾಹ ಕಾರ್ಯಕ್ರಮದ ಹೆಚ್ಚಿನ ವಿವರ ಇಲ್ಲಿದೆ.
ಫಿಟ್ ಇಂಡಿಯಾ ಕಾರ್ಯಕ್ರಮವು ರಾಷ್ಟ್ರವ್ಯಾಪಿ ಆಂದೋಲನವಾಗಿದ್ದು, ವಿದ್ಯಾರ್ಥಿಗಳು ದೈಹಿಕ ಚಟುವಟಿಕೆಗಳಲ್ಲಿ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದರ ಮೂಲಕ ಆರೋಗ್ಯಕರ ಮತ್ತು ಸದೃಢವಾಗಿರುವಂತೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ. ಸದರಿ ಕಾರ್ಯಕ್ರಮದಲ್ಲಿ ರಾಜ್ಯದ ಶಾಲೆಗಳ ಎಲ್ಲಾ ವಿದ್ಯಾರ್ಥಿಗಳನ್ನು ಕ್ರೀಡೆ ಮತ್ತು ದೈಹಿಕ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಮಾಡಿ, ಅವರನ್ನು ದೈಹಿಕ ಮತ್ತು ಮಾನಸಿಕವಾಗಿ ಸದೃಢಗೊಳಿಸುವುದಾಗಿದೆ.
ಈ ಕಾರ್ಯಕ್ರಮವು ಕೇಂದ್ರ ಸರ್ಕಾರದ ಯುವಜನ ಮತ್ತು ಕ್ರೀಡಾ ಮಂತ್ರಾಲಯದಡಿಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ದಿನಾಂಕ:15.01.2023ರವರೆಗೆ
ಹಮ್ಮಿಕೊಳ್ಳಬೇಕಾಗಿದೆ.
ಈ ಕುರಿತಂತೆ ಕೆಳಗಿನ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳುವುದು
- ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು https://fitindia.gov.in/fit-
india-school-week ಯಲ್ಲಿ ಮೊದಲು ನೋಂದಾಯಿಸಿ ನಂತರ 15.01.2023ರೊಳಗೆ ಫಿಟ್ ಇಂಡಿಯಾ
ಶಾಲಾ ಸಪ್ತಾಹವನ್ನು 06 ದಿನಗಳು ಕಡ್ಡಾಯವಾಗಿ ಹಮ್ಮಿಕೊಳ್ಳುವುದು, ಈ ಜ್ಞಾಪನದೊಂದಿಗೆ
ನೋಂದಣಿಯ ಪ್ರಕ್ರಿಯೆ ಬಗ್ಗೆ ಎಂ.ಒ.ಇ ನ ಜ್ಞಾಪನ ಲಗತ್ತಿಸಿದೆ. - ನೋಂದಾಯಿಸಿದ ಶಾಲೆಗಳು ಕಾರ್ಯಕ್ರಮವನ್ನು ಆಯೋಜಿಸಿ ಅದರ ಫೋಟೋ ಮತ್ತು ವಿಡಿಯೊ ಗಳನ್ನು
ಮೇಲೆ ನೀಡಿರುವ ವೆಬ್ ಸೈಟ್‌ನಲ್ಲಿ ಕಡ್ಡಾಯವಾಗಿ ಅಪ್‌ಲೋಡ್ ಮಾಡುವುದು, ಅಪ್‌ಲೋಡ್ ಮಾಡಿದ
ನಂತರ ಡಿಜಿಟಲ್ ಪ್ರಶಸ್ತಿ ಪತ್ರವನ್ನು ಡೌನೋಡ್ ಮಾಡಿಕೊಂಡು, ವಿವರವನ್ನು ರಾಜ್ಯ ಕಚೇರಿಗೆ
ನೀಡುವುದು. - ಕಾರ್ಯಕ್ರಮದ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾ ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾ ದೈಹಿಕ
ಶಿಕ್ಷಣಾಧಿಕಾರಿಗಳನ್ನು ಜಿಲ್ಲಾ ನೋಡಲ್ ಅಧಿಕಾರಿಯಾಗಿ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕು ದೈಹಿಕ
ಶಿಕ್ಷಣಾಧಿಕಾರಿಗಳನ್ನು ತಾಲ್ಲೂಕು ನೋಡಲ್ ಅಧಿಕಾರಿಯಾಗಿ ನೇಮಿಸುವುದು. - ಉಪನಿರ್ದೇಶಕರು (ಆಡಳಿತ) ರವರು ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳೊಂದಿಗೆ ಕಾರ್ಯಕ್ರಮದ ವಿವರ
ಮತ್ತು ಅನುಷ್ಠಾನ ಕುರಿತಂತೆ ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ತಾಲ್ಲೂಕು ದೈಹಿಕ
ಶಿಕ್ಷಣಾಧಿಕಾರಿಗಳ ಸಭೆ ಆಯೋಜಿಸಿ, ಮಾಹಿತಿ ಪಡೆದು ರಾಜ್ಯ ಕಚೇರಿಗೆ ನೀಡುವುದು. - ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ
ಶಾಲೆಗಳ ಮುಖ್ಯ ಶಿಕ್ಷಕರ ಸಭೆ ಕರೆದು ಕಾರ್ಯಕ್ರಮ ಅನುಷ್ಠಾನ ಕುರಿತು ಕ್ರಮ ಕೈಗೊಳ್ಳುವಂತೆ
ಸೂಚಿಸುವುದು. - ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಮುಖ್ಯ ಶಿಕ್ಷಕರು ಕೆಳಕಂಡ ಪಟ್ಟಿಯಲ್ಲಿರುವಂತೆ
ದಿನದ ಚಟುವಟಿಕೆಗಳನ್ನು ಕಡ್ಡಾಯವಾಗಿ ಆಯೋಜಿಸುವುದು. ಈ ಕುರಿತು ಸಾಕಷ್ಟು ಮುಂಚಿತವಾಗಿಯೇ ಶಾಲಾ ಹಂತದ ಯೋಜನೆ ಸಿದ್ಧಪಡಿಸಿಕೊಳ್ಳುವಂತೆ ಸೂಚಿಸುವುದು.
ದಿನ | ಚಟುವಟಿಕೆಯ ವಿವರ |
1. | ಆರಂಭಿಕ ದಿನ – ವಾರ್ಷಿಕ ಕ್ರೀಡಾಕೂಟ |
2. | ಫಿಟೈಸ್ ಪ್ರಾಮುಖ್ಯತೆ – ಚರ್ಚಾಸ್ಪಧೆ, ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಪೋಸ್ಟರ್ ತಯಾರಿಕಾ ಸ್ಪರ್ಧೆ ಚಟುವಟಿಕೆಗಳನ್ನು ಆಯೋಜಿಸುವುದು. |
3. | ಸಾಂಪ್ರದಾಯಿಕ ಆಟಗಳನ್ನು ಆಯೋಜಿಸುವುದು. |
4. | ವಿದ್ಯಾರ್ಥಿಗಳ ಕೇಲೋ ಇಂಡಿಯಾ ಫಿಟೈಸ್ ಮೌಲ್ಯಮಾಪನ ಮಾಡುವುದು. |
5. | ಫಿಟ್ ಇಂಡಿಯಾ ಮೊಬೈಲ್ ಅಪ್ಲಿಕೇಶನ್ ಮೂಲಕ ಸಮುದಾಯದ ಫಿಟ್ಟಿಸ್ ಮೌಲ್ಯಮಾಪನ ಮಾಡುವುದು. |
6. | ಯೋಗಾ ಮತ್ತು ಧ್ಯಾನ |
ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಕೈಗೊಳ್ಳಲಾಗುವ ವಿವಿಧ ಚಟುವಟಿಕೆಗಳ ಕುರಿತು
ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಮಾಹಿತಿ ನೀಡಲು ಕ್ರಮವಹಿಸುವುದು.
-
7 th Pay Scale Calculator CLICK HERE @ CURRENT PAY SCALE / ಪ್ರಸ್ತುತ ವೇತನ ಶ್ರೇಣಿ : ( 30350 -58250) @ Present Basic Pay/ ಈಗಿನ ಮೂಲ ವೇತನ...
-
S S L C ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಸಿದ್ದತೆಗಾಗಿ ಈ ವಿಡಿಯೋಗಳು. 1. Unit- 1st Click Here. 2. Unit-2 Click Here. 3.Unit-3 Click Here. 4...
-
ಸರ್ಕಾರಿ ನೌಕರರು ತಮ್ಮ ಸೇವಾ ಮಾಹಿತಿಯನ್ನು ಖಜಾನೆ-2 ತಂತ್ರಾಂಶದ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. ಹಂತ-1 NEW REGISTER ಆಯ್ಕೆ ಮಾಡಿ. ಹಂತ-2 KGID ಸಂಖ್ಯೆ ನಮೂ...